ಗದಗ: ಇಲ್ಲಿನ ತಿಲಕ್ ಪಾರ್ಕ್ ಬಳಿ ಇರುವ ತ್ರಿವೇಣಿ ಹೋಟೆಲ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ.
ಬೆಂಕಿ ಹೊತ್ತಿದ ಪರಿಣಾಮ, ಹೋಟೆಲ್ನಲ್ಲಿ ಅಡುಗೆ ಸಾಮಗ್ರಿಗಳು, ಪೀಠೋಪಕರಣಗಳು ಸೇರಿದಂತೆ ಬಹುಭಾಗ ಭಸ್ಮವಾಗಿದೆ. ಹಾನಿಯ ಅಂದಾಜು ಸುಮಾರು 10 ಲಕ್ಷ ರೂ. ಎಂದು ಹೇಳಲಾಗಿದೆ. ನಾಗೇಶ್ ಈರಪ್ಪ ಸವಡಿ ಅವರಿಗೆ ಈ ಹೋಟೆಲ್ ಸೇರಿದ್ದು, ಒಂದು ಅಂತಸ್ತಿನ ಹೋಟೆಲ್ನ ಬಹುಭಾಗ ಬೆಂಕಿಗೆ ಒಳಗಾಗಿದೆ.

ಸಮಯಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲಿಂಡರ್ಗಳು ಮತ್ತು ಪಕ್ಕದ ಕಟ್ಟಡಗಳಿಗೆ ಬೆಂಕಿ ತಲುಪುವ ಮೊದಲು ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಗದಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.



