ಗದಗ, ಕೊಪ್ಪಳ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಪಟ್ಟಣದಲ್ಲಿ ಪ್ರಪ್ರಥಮ ಬಾರಿಗೆ ಮಿಥುನ್ ಜಿ.ಪಾಟೀಲ್ ಅವರ ಜನ್ಮದಿನದ ಪ್ರಯುಕ್ತ, ಗದಗ ಮತ್ತು ಕೊಪ್ಪಳ ಜಿಲ್ಲಾ ಮಟ್ಟದ ಎತ್ತರ ಪ್ರಕಾರದ ದೇಹದಾರ್ಢ್ಯ ಸ್ಪರ್ಧೆಯು ಈಶ್ವರ ನಗರದ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಜರುಗಿತು.

Advertisement

ಸ್ಪರ್ಧೆಯಲ್ಲಿ ದೇವು ಫಿಟ್ನೆಸ್ ಸೆಂಟರ್ ವತಿಯಿಂದ ಅನಿಲ ಬೆಳವಣಕಿ ಪ್ರಥಮ, ನವೀನ್ ಬಣ್ಣದಬಾವಿ ದ್ವಿತೀಯ, ಶಿವು ಕೊಣ್ಣೂರ್ 2ನೇ ವಿಭಾಗದಲ್ಲಿ ದ್ವಿತೀಯ ಮತ್ತು ಸೋಹಿಲ್ ಅಗಸಿಮನಿ ನಾಲ್ಕನೇ ಸ್ಥಾನ ಪಡೆದು ಗದಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಸ್ಪರ್ಧೆಯ ಸಾಧಕರಿಗೆ ಗುರುಗಳಾದ ದೇವು ವಡೆಮ್ಮನವರ, ಪ್ರವೀಣ್ ಬಣ್ಣದಬಾವಿ, ಮಂಜುನಾಥ್ ಬಣ್ಣದಬಾವಿ, ಕೊಟ್ರೇಶ್ ಬಣ್ಣದಬಾವಿ, ಗಣೇಶ್ ಬಣ್ಣದಬಾವಿ, ಗಿರೀಶ್ ಬಣ್ಣದಬಾವಿ, ಅವರು ಅಭಿನಂದಿಸಿ ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಶಾಲಿಯಾಗಲೆಂದು ಹಾರೈಸಿದರು.


Spread the love

LEAVE A REPLY

Please enter your comment!
Please enter your name here