ಗದಗ: ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಖಾರದ ಪುಡಿ ಎರಚಿ ನಗದು ದೋಚಿ ಖದೀಮರು ಎಸ್ಕೇಪ್ ಆಗಿರುವ ಘಟನೆ ಗದಗನ ಬೆಟಗೇರಿಯ ಶರಣಬಸವೇಶ್ವರ ನಗರದ ಶ್ರೀ ಸಾಯಿ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.
ರಾತ್ರಿ 2 ಗಂಟೆ ಸುಮಾರಿಗೆ ಖದೀಮರು ಪೆಟ್ರೋಲ್ ಬಂಕ್’ಗೆ ನುಗ್ಗಿ ಈ ಕೃತ್ಯ ಎಸಗಿದ್ದು, ಮೊದಲಿಗೆ ಪೆಟ್ರೊಲ್ ಬಂಕ್ ನ ಗಾಜಿನ ಬಾಗಿಲು ಪೀಸ್ ಪೀಸ್ ಮಾಡಿದ ಮೂವರು ಖದೀಮರು, ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಬಳಿಕ ಬೀರು ಒಡೆದು ಹಣಕ್ಕಾಗಿ ಖದೀಮರು ಜಾಲಾಡಿದ್ದಾರೆ. ಅಲ್ಲದೇ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ಕ್ಯಾಶ್ ಬ್ಯಾಗ್ ಕಿತ್ತುಕೊಂಡ ಎಸ್ಕೇಪ್ ಆಗಿದ್ದಾರೆ.
ಅಕ್ಕ ಪಕ್ಕದ ನಾಲ್ಕು ಮನೆಗಳಲ್ಲಿ ಸಿ ಸಿ ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು. ಆದ್ರೆ ರಾತ್ರಿ ಆ ನಾಲ್ಕು ಮನೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಪೂರ್ವನಿಯೋಜಿತ ಕಳ್ಳತನ ಶಂಕೆ ವ್ಯಕ್ತವಾಗಿದ್ದು,. ಇನ್ನು ಘಟನೆ ಸಂಬಂಧ ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.