ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಪ್ರೀಮಿಯರ್ ಲೀಗ್-2024(ಜಿ.ಪಿ.ಎಲ್) ೨ನೇ ಆವೃತ್ತಿ ಲೆದರ ಬಾಲ್ ಕ್ರಿಕೆಟ್ ಮತ್ತೆ ಪ್ರಾರಂಭವಾಗಲಿದೆ. ಕಳೆದ ಬಾರಿ ಯಶಸ್ವಿಯಾಗಿ ನೆರವೇರಿದ ಟೂರ್ನಿಯ ಕುರಿತು ಗದಗ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೂರ್ನಿಯಲ್ಲಿ ಎಲ್ಲಾ ಕ್ರಿಕೆಟ್ ಕ್ರೀಡಾಪಟುಗಳಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 11 ಕೊನೆಯ ದಿನವಾಗಿರುತ್ತದೆ ಎಂದು ಕಮಿಟಿಯ ಸದಸ್ಯರು ತಿಳಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಹಾಗೂ ಅಕ್ಟೋಬರ್‌ನಲ್ಲಿ ಈ ಕ್ರಿಕೆಟ್ ಟೂರ್ನಿಯು ಪ್ರಾರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.



