ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಭಾಗದ ಜನತೆ ಕಾತರದಿಂದ ಕಾಯುತ್ತಿರುವ ವೈಟ್ ಲೆದರ್ಬಾಲ್ ಟೂರ್ನಮೆಂಟ್ `ಗದಗ ಪ್ರೀಮಿಯರ್ ಲೀಗ್’ ಡಿ. 25ರಿಂದ ಪ್ರಾರಂಭಗೊಳ್ಳಲಿದೆ.
ಈ ಬಾರಿ ಗದಗ ಟೈಟಾನ್ಸ್ ತಂಡದ ಪರವಾಗಿ ಯುವ ನಾಯಕರಾದ ಕೆ.ಹೆಚ್. ಪಾಟೀಲರು ಮೈದಾನಕ್ಕೆ ಇಳಿಯಲಿದ್ದಾರೆ. ಬಹು ದಿನಗಳಿಂದ ಯುವಕರು, ಕ್ರಿಕೆಟ್ ಅಭಿಮಾನಿಗಳಲ್ಲಿ ಹಾಗೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ ಈ ಪಂದ್ಯ ಆರಂಭಗೊಳ್ಳಲಿದ್ದು ಸಂತೋಷದ ವಿಷಯವಾಗಿದೆ.
ಗದಗ-ಬೆಟಗೇರಿಯ ಎ.ಎಸ್.ಎಸ್ ಕಾಲೇಜ್ ಆಫ್ ಕಾಮರ್ಸ್ ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಗದಗ ನಗರದ ಯುವಕರು, ಕ್ರೀಡಾಭಿಮಾನಿಗಳು ಟೂರ್ನಮೆಂಟ್ಗೆ ಸಾಕ್ಷಿಯಾಗಬೇಕೆಂದು ಗದಗ-ಬೆಟಗೇರಿ ಶಹರ ಯುವ ಕಾಂಗ್ರೆಸ್ ಅಧ್ಯಕ್ಷ ಅನ್ವರ್ ನದಾಫ್ ಹಾಗೂ ಅಭಿಷಯ್ ಕ್ರಿಕೆಟ್ ಅಭಿಮಾನಿಗಳಿಗೆ ಸ್ವಾಗತ ಕೋರಿದ್ದಾರೆ.



