ವಿಜಯಸಾಕ್ಷಿ ಸುದ್ದಿ, ಗದಗ: ಅಂಧ, ಅನಾಥರ ಆಶಾಕಿರಣ, ನಡೆದಾಡುವ ದೇವರು ಶ್ರೀ ಗುರು ಪುಟ್ಟರಾಜ ಗವಾಯಿಗಳವರ ಹೆಸರನ್ನು ನವಿಕೃತಗೊಂಡ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಕ್ರಾಂತಿಸೇನಾ ಸಂಘಟನೆಯ ಗದಗ ಜಿಲ್ಲಾ ಅಧ್ಯಕ್ಷ ಬಾಬು ಬಾಕಳೆ ಮನವಿ ಮಾಡಿದ್ದಾರೆ.
Advertisement
ಭಕ್ತರ ಕೋರಿಕೆಯಂತೆ ಈಗಾಗಲೇ ಹುಬ್ಬಳ್ಳಿಯ ಪವಾಡ ದೇವಮಾನವರು, ನಡೆದಾಡುವ ದೇವರು ಶ್ರೀ ಗುರು ಸಿದ್ಧಾರೂಢ ಅಜ್ಜನವರ ಹೆಸರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡುವ ಮೂಲಕ ಸಿದ್ಧಾರೂಢರಿಗೆ ಗೌರವ ನೀಡಿದಂತೆಯೇ, ಗದಗಿನ ನವೀಕೃತಗೊಂಡಿರುವ ರೈಲ್ವೆ ನಿಲ್ದಾಣಕ್ಕೆ ಶ್ರೀ ಗುರು ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡಿ ಶ್ರೀಗಳಿಗೆ ಗೌರವ ಸಲ್ಲಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.