ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚಿಗೆ ಕರ್ನಾಟಕ ಸ್ಟೇಟ್ ರೈಫಲ್ ಅಸೋಶಿಯೇಶನ್ ಆಯೋಜಿಸಿದ್ದ ನಾಗರಾಜರಾವ್ ಜಗದಲೆ ಸ್ಟೇಟ್ ಶೂಟಿಂಗ್ ಕಾಂಪಿಟೇಶನ್–೨೦೨೪ರಲ್ಲಿ ಗದಗ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ವಿದ್ಯಾರ್ಥಿಗಳು ಭಾಗವಹಿಸಿ ಪದಕ ಪಡೆದು ಸಾಧನೆಗೈದಿದ್ದಾರೆ.
೧೦ ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಸಿದ್ದಾರ್ಥ ಎಂ.ಬಡ್ನಿ ಕಂಚಿನ ಪದಕ, ಸಬ್‌ಯುಥ್ ವಿಭಾಗದಲ್ಲಿ ರಿಯಾನ್ ಎಂ.ಹಮ್ಮೀದ, ಸಿದ್ದಾರ್ಥ ಬಡ್ನಿ, ವಾಹೀದ್ ಗೋನಾಳ ಕಂಚಿನ ಪದಕ ಪಡೆದಿದ್ದಾರೆ.
ತರಬೇತುದಾರ ಬಸವರಾಜ ಹೊಂಬಾಳಿ ಸೀನಿಯರ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದು, ಸುಶಾಂತ ಉಗಲಾಟ, ಐಮನ್ ಕೊಪ್ಪಳ ಇವರು ಸೌಥ್ ಜೋನಲ್‌ಗೆ ಆಯ್ಕೆಯಾಗಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಕಾಡೆಮಿಗೆ ಅಧ್ಯಕ್ಷ ಮುರುಘರಾಜೇಂದ್ರ ಎಂ.ಬಡ್ನಿ ಹಾಗೂ ಪಾಲಕರಾದ ಮುನೀರಅಹ್ಮದ, ಗಣೇಶ ಕಬಾಡಿ, ಡಾ. ಪ್ರದೀಪ ಉಗಲಾಟ, ರುಕ್ಸನಾ ಗೋನಾಳ ಹಾಗೂ ಎಲ್ಲಾ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.