ವಿಜಯಸಾಕ್ಷಿ ಸುದ್ದಿ, ಗದಗ : ನಮ್ಮೂರು ದಸರಾ ಉತ್ಸವವನ್ನು ಗದಗ ಎಸ್‌ಎಸ್‌ಕೆ ಸಮಾಜ ಬಾಂಧವರು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿರುವುದು ಸಂತಸ ಮೂಡಿಸಿದೆ ಎಂದು ನ್ಯಾಯವಾದಿ ಹಾಗೂ ಚಕ್ರವರ್ತಿ ದಿನಪತ್ರಿಕೆಯ ಸಹ ಸಂಪಾದಕರಾದ ಟಿ.ಎನ್. ಬಾಂಡಗೆ ಹೇಳಿದರು.
ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಬಾಸ್ಕರಸಾ ಪವಾರ ಸಭಾಂಗಣದ ದಸರಾ ದರಬಾರ ವೇದಿಕೆಯಲ್ಲಿ ಜರುಗಿದ `ನಮ್ಮೂರು ದಸರಾ-2024′ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿ, ದಸರಾ ಹಬ್ಬವೆಂದರೆ ಎಸ್.ಎಸ್.ಕೆ ಸಮಾಜ ಬಾಂಧವರಿಗೆ ಧರ್ಮಾಚರಣೆ, ಸಂಭ್ರಾಮಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಲ್ಲರೂ ಒಟ್ಟಾಗಿ ಆಚರಿಸುವ ಹಬ್ಬವಾಗಿದೆ. ಈ ದಸರಾ ಉತ್ಸವದಲ್ಲಿ ಬೆಳಿಗ್ಗೆ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿದಿನ ಸಂಜೆ ಯುವ ಸಮೂಹಕ್ಕೆ ಮತ್ತು ಮಕ್ಕಳಿಗಾಗಿ ದಾಂಡಿಯಾ, ಫ್ಯಾಶನ್ ಶೋ, ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವಾರು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಗದಗ ಎಸ್.ಎಸ್.ಕೆ ಸಮಾಜ ದಸರಾ ಹಬ್ಬವನ್ನು ಯಶಸ್ವ್ವಿಯಾಗಿ ಆಚರಿಸಿಕೊಂಡು ಬರುತ್ತಿರುವದರಿಂದ ಎಸ್‌ಎಸ್‌ಕೆ ಸಮಾಜದಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಎಸ್.ಎಸ್.ಕೆ ಸಮಾಜ ಪಂಚ ಕಮಿಟಿ ಅಧ್ಯಕ್ಷ ಫಕೀರಸಾ ಬಾಂಡಗೆ ವಹಿಸಿದ್ದರು. ವೇದಿಕೆ ಮೇಲೆ ಎಸ್.ಎಸ್.ಕೆ. ಸಮಾಜದ ಹಿರಿಯರು ಹಾಗೂ ಗಣ್ಯ ವ್ಯಾಪಾರಸ್ಥರಾದ ಜವಾಹರಲಾಲಸಾ ಖೋಡೆ, ಪಂಚ ಕಮಿಟಿಯ ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ಕಾರ್ಯದರ್ಶಿ ರವಿ ಶಿದ್ಲಿಂಗ, ದಸರಾ ಕಮಿಟಿಯ ಚೇರಮನ್ ವಿಷ್ಣುಸಾ ಶಿದ್ಲಿಂಗ ಉಪಸ್ಥಿತರಿದ್ದರು.
ಅನಿಲ್ ಖಟವಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚ ಕಮಿಟಿಯ ಸದಸ್ಯರಾದ ಸುರೇಶಕುಮಾರ ಬದಿ, ಮಾರುತಿ ಪವಾರ, ಬಲರಾಮ ಬಸವಾ, ಶ್ರೀನಿವಾಸ ಬಾಂಡಗೆ, ಮೋತಿಲಾಲಸಾ ಪೂಜಾರಿ, ಪರಶುರಾಮಸಾ ಬದಿ, ವಿನೋದ ಬಾಂಡಗೆ, ಪ್ರಕಾಶ ಬಾಕಳೆ, ಅಂಬಾಸಾ ಖಟವಟೆ, ಸಾಗರ ಪವಾರ, ಸತೀಶ ದೇವಳೆ, ಶ್ರೀಕಾಂತ ಬಾಕಳೆ, ನಾಗರಾಜ ಖೋಡೆ, ಸುಧೀರ ಕಾಟೀಗರ, ರಾಮಚಂದ್ರಸಾ ಶಿದ್ಲಿಂಗ, ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ, ರೇಣುಕಾಬಾಯಿ ಕಲಬುರ್ಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಜಿ.ಎನ್. ಹಬೀಬ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ ಜಿತೂರಿ ವಂದಿಸಿದರು.
ಮುಂದಿನ ದಿನಗಳಲ್ಲಿ ಇದೇ ರೀತಿ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗದಗ ಎಸ್‌ಎಸ್‌ಕೆ ಸಮಾಜ ಮಾದರಿಯಾಗಬೇಕು. ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದಿನ ಯುವಕರು ದಸರಾ ಹಬ್ಬವನ್ನು ಅದ್ದೂರಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದು ಟಿ.ಎನ್. ಬಾಂಡಗೆ ಹೇಳಿದರು.