ಗದಗ: ಗದಗ ನಗರದ ಅಂಬೇಡ್ಕರ್ ಭವನ ಸಮೀಪ ಬುಧವಾರ ಹಾಡಹಗಲೇ ಚೈನ್ ಸ್ನ್ಯಾಚಿಂಗ್ ನಡೆದಿದ್ದು, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಚಿನ್ನದ ತಾಳಿ ಕಿತ್ತು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇವೆ ನಿರ್ವಹಿಸುತ್ತಿರುವ ಎಫ್ ಡಿಸಿ ಶಾಂತಾ ಎಂಬವರು, ಮಧ್ಯಾಹ್ನ ಊಟ ಮುಗಿಸಿಕೊಂಡು ಕಚೇರಿಗೆ ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ.
ಸ್ಕೂಟರ್ ನಲ್ಲಿ ಹೊರಟಿದ್ದ ಶಾಂತಾ ಅವರನ್ನು ಹತ್ತಿರದಿಂದ ಹಿಂಬಾಲಿಸಿದ ಇಬ್ಬರು ಯುವಕರು ಮಾಸ್ಕ್ ಹಾಕಿಕೊಂಡು ಬೈಕ್ ಮೇಲೆ ಬಂದು ತಾಳಿ ದೋಚಿ ಪರಾರಿ ಆಗಿದ್ದಾರೆ.
20 ಗ್ರಾಮ ತೂಕದ ಚಿನ್ನದ ಸರ ದೋಚಿ ಕಳ್ಳರು ಎಸ್ಕೇಪ್ ಆಗಿದ್ದು, ಘಟನೆ ಬಳಿಕ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಸರಗಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.