ಗದಗ: ಅಪರಿಚಿತ ವಾಹನ ಡಿಕ್ಕಿ – ಮೂವರು ಸಾವು, ಚಾಲಕ ಎಸ್ಕೇಪ್!

0
Spread the love

ಗದಗ:- ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ನಲ್ಲಿ ಹೊರಟಿದ್ದ ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ಜರುಗಿದೆ.

Advertisement

ನಿಂಗಪ್ಪ ಮಾದರ (35), ಯಮನಪ್ಪ ಮಾದರ (45) ಮತ್ತು ಮಂಜುನಾಥಗೌಡ ಮೃತ ದುರ್ದೈವಿಗಳು. ಇವರು ಗದಗ ಜಿಲ್ಲೆ ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಮೂವರು ಒಂದೇ ಬೈಕ್ ನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಬೈಕ್ ನಲ್ಲೇ ಹೊರಟಿದ್ದ ಮಂಜುನಾಥ್ ಗೌಡಗೆ ತೀವ್ರ ಗಾಯವಾಗಿತ್ತು.

ಕೂಡಲೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನೂ ಅಪಘಾತದ ನಂತರ ಅಪರಿಚಿತ ವಾಹನದ ಸಮೇತ ಚಾಲಕ ಪರಾರಿ ಆಗಿದ್ದು, ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ


Spread the love

LEAVE A REPLY

Please enter your comment!
Please enter your name here