ಗದಗ:- ಐತಿಹಾಸಿಕ ದೇವಸ್ಥಾನಗಳ ಸ್ವರ್ಗ ಎಂದೇ ಕರೆಯುವ ಲಕ್ಕುಂಡಿಯಲ್ಲಿ ದುಷ್ಕರ್ಮಿಗಳು ವಾಮಾಚಾರ ಮಾಡಿದ್ದು, ಗ್ರಾಮಸ್ಥರು ಹಾಗೂ ಪ್ರವಾಸಿಗರಲ್ಲಿ ಆತಂಕ ಹುಟ್ಟು ಹಾಕಿದೆ.
Advertisement
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ದಾನಚಿಂತಾಮಣಿ ಅತ್ತಿಮಬ್ಬೆ ಮಹಾದ್ವಾರ ಬಳಿ ದುಷ್ಕರ್ಮಿಗಳಿಂದ ವಾಮಾಚಾರ ನಡೆದಿದೆ. ನಕ್ಷತ್ರ ಆಕಾರದಲ್ಲಿ ರಂಗೋಲಿ ಬಿಡಿಸಿ ಮಂಗಳ ಕುಂಡ ರಚಿಸಿ ನಿಂಬೆಹಣ್ಣು ಹಾಕಿದ್ದಾರೆ.
ಎಕ್ಕಿ ಗಿಡದ ಎಲೆಗಳು, ಅರಿಸಿಣ ಕುಂಕುಮ ಹಾಕಿ ವಾಮಾಚಾರ ಮಾಡಿದ್ದಾರೆ. ವಾಮಾಚಾರ ಮಾಡಿದ ಸ್ಥಳದಲ್ಲಿ ಆತಂಕ ಮನೆಮಾಡಿದ್ದು, ಗ್ರಾಮಸ್ಥರು, ಪ್ರವಾಸಿಗರು ಭಯ ಭೀತರಾಗಿದ್ದಾರೆ. ಐತಿಹಾಸಿಕ ಪ್ರವಾಸಿತಾಣವಾದ ಲಕ್ಕುಂಡಿಯಲ್ಲಿ ವಾಮಾಚಾರಿಗಳನ್ನು ಹಿಡಿಯುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.