ಗದಗ:- ನಗರದ ಪಾಪ್ಯುಲರ್ ಬಾರ್ ನಲ್ಲಿ ಮೊನ್ನೆ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹರ ಪೊಲೀಸರು ಸುಮೊಟೊ ಕೇಸ್ ದಾಖಲಿಸಿ ತನಿಖೆ ಕೈಗೊಂಡು ಇಬ್ಬರು ಪುಡಿರೌಡಿಗಳನ್ನು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಜೀವನ್ ಹಾಗೂ ಆಸಿಫ್ ಬಂಧಿತ ಪುಡಿ ರೌಡಿಗಳು. ಬಂಧಿತ ಆರೋಪಿಗಳು, ನಗರದ ಪಾಪ್ಯುಲರ್ ಬಾರ್ ನಲ್ಲಿ ಕುಡಿಯುತ್ತ ಕುಳಿತಿದ್ದ ವ್ಯಕ್ತಿಯೋರ್ವನ ಮೇಲೆ ಏಕಾ ಏಕಿ ಜಗ್, ಗ್ಲಾಸ್, ಬಾಟಲ್ ನಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದರು. ಘಟನೆ ಸಂಬಂಧ ಸುಮೊಟೊ ದೂರು ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು, CCTV ದೃಶ್ಯ ಆಧರಿಸಿ ಇಬ್ಬರನ್ನು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಗದಗ ಎಸ್ಪಿ ಬಿ ಎಸ್ ನೇಮಗೌಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ:-
ಗದಗ ಜಿಲ್ಲೆಯಲ್ಲಿ ಇತ್ತೀಚೆಗೆ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಯಾವುದೇ ಕಾನೂನು ಭಯ ಇಲ್ಲದೆ, ಗಲಾಟೆ ಮಾಡ್ತಾಯಿದ್ದಾರೆ. ಅದರಲ್ಲೂ ಬಾರ್ ಗಳಲ್ಲಿ ಗಲಾಟೆ ಹೆಚ್ಚಾಗುತ್ತವೆ. ಹದಿನೈದು ದಿನಗಳ ಹಿಂದೆ ಸ್ನ್ಯಾಕ್ಸ್ ವಿಷಯಕ್ಕೆ ದೊಡ್ಡ ಗಲಾಟೆಯಾಗಿತ್ತು. ಇದ್ರ ಬೆನ್ನಲ್ಲೇ ಪುಡಿ ರೌಡಿಗಳು ಪಾಪ್ಯುಲರ್ ಬಾರ್ ನಲ್ಲಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದರು. ಗ್ಲಾಸ್, ಬಾಟಲ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಸುಮೊಟೊ ಕೇಸ್ ದಾಖಲಾಗಿತ್ತು. ಇದರ ಬೆನ್ನಲ್ಲೇ ತನಿಖೆ ಕೈಗೊಂಡ ಪೊಲೀಸರು, ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.


