ಗದಗ: ಪಾಪಿ ಪುತ್ರನೊಬ್ಬ ಬುದ್ದಿ ಹೇಳಿದ್ದಕ್ಕೆ ಮಲಗಿದಲ್ಲೇ ಹೆತ್ತ ತಾಯಿಯನ್ನೆ ಕೊಂದಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ನಡೆದಿದೆ. ಶಾರದಮ್ಮ ಅಗಡಿ (85) ಕೊಲೆಯಾದ ತಾಯಿಯಾಗಿದ್ದು, ಸಿದ್ಧಲಿಂಗಪ್ಪ ಅಗಡಿ ಕೊಲೆ ಮಾಡಿದ ಪಾಪಿ ಪುತ್ರನಾಗಿದ್ದಾನೆ.
ನಿನ್ನೆ ಪಕ್ಕದ ಮನೆಯವರ ಜೊತೆ ಸಿದ್ಧಲಿಂಗಪ್ಪ ಜಗಳ ಮಾಡಿಕೊಂಡಿದ್ದ. ಈ ವೇಳೆ ನನ್ನ ಮಗನ ತಲೆ ಸರಿಯಿಲ್ಲ ಬಿಟ್ಟು ಬಿಡಿ ಎಂದು ತಾಯಿ ಬೇಡಿಕೊಂಡಿದ್ದರು. ಇನ್ನು ತಾಯಿಯನ್ನು ಕೊಂದು ಸಹೋದರಿಯರಿಗೆ ಫೋನ್ ಮಾಡಿದ ಪಾಪಿ, ಅಮ್ಮ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾನೆ.
ಮಾನಸಿಕ ಅಸ್ವಸ್ಥ ಸಹೋದರನ ಮಾತು ನಂಬದ ಅಕ್ಕಂದಿರು, ಬಳಿಕ ಪೊಲೀಸರು ಮಾಹಿತಿ ನೀಡಿದ ಬಳಿಕ ಓಡೋಡಿ ಬಂದಿದ್ದಾರೆ. ರಾತ್ರಿ ಮಲಗಿದಲ್ಲೇ ತಾಯಿಯನ್ನು ಶಿವದಾರದಿಂದ ಉಸಿರು ಗಟ್ಟಿಸಿ ಕೊಂದಿದ್ದಾನೆ. ನಂತರ ಚಾಕುವಿನಿಂದ ಇರಿದು ಕೊಲೆಗೈದಿದ್ದ, ಇದರಿಂದ ಅಜ್ಜಿ ಮಲಗಿದ ಹಾಸಿಗೆಯಲ್ಲಾ ರಕ್ತಸಿಕ್ತವಾಗಿದ್ದು,
ಸ್ಥಳಕ್ಕೆ ಎಸ್ಪಿ ಬಿ ಎಸ್ ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.