ಗದಗ:- ಛಾವಣಿ ಕುಸಿದ ಪರಿಣಾಮ ಕಟ್ಟೆಯ ಮೇಲೆ ಕೂತಿದ್ದ ಮೂವರು ಮಹಿಳೆಯರಿಗೆ ಗಾಯಗಳಾಗಿರುವ ಘಟನೆ ಗದಗ ನಗರದ ಕಾಗದಗೇರಿ ಬಡಾವಣೆಯಲ್ಲಿ ಜರುಗಿದೆ.
Advertisement
ಘಟನೆಯಲ್ಲಿ ಫರೀದಾ, ಮಾಬುಬ್ಬಿ, ಹೀನಾ ಗಾಯಗೊಂಡ ಮಹಿಳೆಯರು. ಇವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆಯರು, ಮನೆ ಎದುರಿನ ಕಟ್ಟೆ ಮೇಲೆ ಕೂತು ಮಾತನಾಡುತ್ತಿದ್ದಾಗ ಮಳೆಯಿಂದಾಗಿ ಶಿಥಿಲಗೊಂಡ ಛಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.