ಗದಗ|ಬಿಜೆಪಿ ಮುಖಂಡನ ಹುಟ್ಟು ಹಬ್ಬದಲ್ಲಿ ರಕ್ತದಾನ ಮಾಡಿದ ಪತ್ರಕರ್ತರು!

0
Spread the love

ಗದಗ:- ಬಿಜೆಪಿಯ ಯುವ ಮುಖಂಡ ವಸಂತ ಪಡಗದ ಅವರ 38ನೇ ಹುಟ್ಟು ಹಬ್ಬದಂದು ಗದಗನ ಹಲವು ಪತ್ರಕರ್ತರು ರಕ್ತದಾನ ಮಾಡುವ ಮೂಲಕ ಮಾದರಿಯಾದರು.

Advertisement

ಗದಗ ನಗರದ ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿರುವ ವಾಡಿಯಾ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ವಸಂತ ಪಡಗದ ಅವರ 38ನೇ ಹುಟ್ಟುಹಬ್ಬದ ನಿಮಿತ್ತ ವಸಂತ ಪಡಗದ ಅಭಿಮಾನಿ ಬಳಗ, ಅಂಬಿಕಾ ರಕ್ತನಿಧಿ ಹಾಗೂ ಬಾಲ ವಿನಾಯಕ ರಕ್ತದಾನ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಜಯವಾಣಿ ಜಿಲ್ಲಾ ವರದಿಗಾರ ಶಿವಾನಂದ ಹಿರೇಮಠ, ಉದಯವಾಣಿ ಜಿಲ್ಲಾ ವರದಿಗಾರ ಅರುಣ ಕುಮಾರ್ ಹಿರೇಮಠ, ಜಿಲ್ಲಾ ವರದಿಗಾರ ಪ್ರವೀಣ್ ಕುಮಾರ್ ಮಾಂತಾ ಸೇರಿದಂತೆ ಹಲವರು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ವಸಂತ ಪಡಗದ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ವಸಂತ ಪಡಗದ ಅಭಿಮಾನಿ ಬಳಗದ ಶರಣು ಮರಿಗೌಡರ, ಜಯಪ್ಪ ಕುರ್ತಕೋಟಿ, ಮಂಜುನಾಥ ರಾಯಚೂರು, ಮೋಹನ ವರವಿ, ಮುತ್ತಣ್ಣ ಪಡಗದ, ಸಂಗಪ್ಪ ದೊಡ್ಡಣ್ಣವ್ವರ, ಕುಮಾರ ಕಣವಿ, ಪ್ರವೀಣ ಕರಿಬಿಷ್ಠಿ, ಷಣ್ಮುಖ, ಅರುಣ ಹೊಂಬಾಳಿ, ಬಸವರಾಜ ತುಪ್ಪದ, ಪಂಚಾಕ್ಷರಿ ಅಂಗಡಿ, ಮಹೇಶ ಗಾಣಿಗೇರ, ಸಂಗಪ್ಪ ಚಿತ್ತರಗಿ ರಜತ್ ಭೀಮಕರ ಸೇರಿದಂತೆ ಅನೇಕರು ಹಾಜರಿದ್ದರು.

ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.


Spread the love

LEAVE A REPLY

Please enter your comment!
Please enter your name here