ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶ್ರೀಕ್ಷೇತ್ರ ವರವಿ ಜಗದ್ಗುರು ಮೌನೇಶ್ವರರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಹಾಗೂ ಶ್ರೀ ಸೋಮಲಿಂಗಯ್ಯ ಒಡೆಯರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವಿಧಿ ವಿಧಾನಗಳೊಂದಿಗೆ ರಥದ ಗಾಲಿ ಪೂಜೆ ನೆರವೇರಿತು.
ಪೂಜಾ ಕಾರ್ಯಕ್ರಮದಲ್ಲಿ ಗದಗ ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಜಗದ್ಗುರು ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ ನರಗುರುಂದ, ಟ್ರಸ್ಟಿಗಳಾದ ಕೊಟ್ರೇಶ ಆಚಾರ್ಯ, ನಿರಂಜನ ಬಡಿಗೇರ, ಚಂದ್ರಕಾಂತ ಸೋನಾರ, ನಾರಾಯಣಪ್ಪ ಸಿಂಗಟಾಲೂರ, ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ, ಬೆಟಗೇರಿ ಕಾಳಿಕಾ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶ್ರೀಧರ ಕೊಣ್ಣೂರ, ವರವಿ ಮೌನೇಶ್ವರ ಯುವಕ ಮಂಡಳದ ಅಧ್ಯಕ್ಷ ಚಿದಾನಚಿದ ಆಚಾರ್ಯ, ಸಮಾಜದ ಮುಖಂಡರಾದ ವಿಶ್ವನಾಥ ಯ. ಕಮ್ಮಾರ, ಮೌನೇಶ ಚಿ.ಬಡಿಗೇರ(ನರೇಗಲ್ಲ), ನಾಗರಾಜ ಕಮ್ಮಾರ, ಎಸ್.ಎನ್. ಬಡಿಗೇರ, ಮನೋಹರ ಕೆ., ಪೂರ್ವಾಚಾರ, ನರಸಪ್ಪ, ಗಣೇಶ ಕಮ್ಮಾರ, ಚಿದಾನಂದ ಶಿಲ್ಪಿ, ಅಶೋಕ ಬಡಿಗೇರ, ಶಂಕರಾಚಾರ್ಯ ಪತ್ತಾರ, ಶ್ರೀಧರ ಪತ್ತಾರ, ರಮೇಶ ಬಡಿಗೇರ ಸೇರಿದಂತೆ ಸಮಸ್ತ ವಿಶ್ವಕರ್ಮ ಸಮಾಜ ಬಾಂಧವರು, ವರವಿ ಗ್ರಾಮಸ್ಥರು ಮುಂತಾದವರಿದ್ದರು.