ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ಪಾಠದೊಂದಿಗೆ ಆಟಗಳಲ್ಲಿಯೂ ಪಾಲ್ಗೊಂಡು ಸದೃಢತೆ ಹೊಂದಬೇಕು. ಆಟಗಳು ಮಕ್ಕಳಲ್ಲಿ ಸ್ಪರ್ಧಾತ್ಮಕತೆ ಹಾಗೂ ಸ್ಪೂರ್ತಿ ತುಂಬುತ್ತವೆ ಎಂದು ಇನ್ನರ್‌ವ್ಹೀಲ್ ಡಿಸ್ಟ್ರೀಕ್ಟ್ ಚೇರಮನ್ ಜ್ಯೋತಿ ಕಿರಣ್ ದಾಸ್ ಹೇಳಿದರು.
ಅವರು ಗದಗ-ಬೇಟಗೇರಿ ಇನ್ನರ್‌ವ್ಹೀಲ್‌ನ ದತ್ತು ಶಾಲೆಯಾದ ಗದುಗಿನ ಸರ್ಕಾರಿ ಶಾಲೆ ನಂ. ೧೬ರಲ್ಲಿ ಕ್ಲಬ್‌ನಿಂದ ಕೊಡಮಾಡಿದ ಶೈಕ್ಷಣಿಕ ವಸ್ತುಗಳನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದರು.
ಗದಗ-ಬೇಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮಕ್ಕಳ ಕಲಿಕೆಗೆ ಪೂರಕವಾಗುವ ಸಾಮಗ್ರಿಗಳನ್ನು ಒದಗಿಸಿ ನಂತರ ಅದನ್ನು ಹ್ಯಾಪಿ ಸ್ಕೂಲ್ ಎಂದು ಘೋಷಿಸಲಾಗಿದೆ ಎಂದರು.
ಪಿ.ಡಿ.ಸಿ ಪ್ರೇಮಾ ಗುಳಗೌಡ್ರ ಮಾತನಾಡಿ, ಕ್ಲಬ್‌ನಿಂದ ಶಾಲೆಗೆ ಅಗತ್ಯವಾದ ಕ್ರೀಡಾ ಸಾಮಗ್ರಿಗಳು, ಲೈಬ್ರರಿ ಪುಸ್ತಕಗಳು, ಕುರ್ಚಿ-ಟೇಬಲ್‌ಗಳು, ಯುನಿಫಾರಂ ವಿತರಿಸಲಾಗಿದ್ದು, ಕ್ಲಬ್‌ನ ಸೇವೆ ನಿರಂತರ ಇರುತ್ತದೆ ಎಂದರು.
ಕ್ಲಬ್ ಅಧ್ಯಕ್ಷೆ ನಾಗರತ್ನಾ ಮಾರನಬಸರಿ ಸ್ವಾಗತಿಸಿದರು. ಕಾರ್ಯದರ್ಶಿ ವೀಣಾ ತಿರ್ಲಾಪೂರ ನಿರೂಪಿಸಿದರು. ಸಿ.ಎಲ್.ಸಿ.ಸಿ ಸುಮಾ ಪಾಟೀಲ ಪರಿಚಯಿಸಿದರು. ಐ.ಎಸ್.ಓ ಪುಷ್ಪಾ ಭಂಡಾರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮೀನಾಕ್ಷಿ ಕೊರವನವರ, ಸುವರ್ಣಾ ವಸ್ತçದ, ಪ್ರತಿಭಾ ಭದ್ರಶೆಟ್ಟಿ, ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಎಂ.ಆರ್. ನೀಲಣ್ಣವರ, ಶಿಕ್ಷಕಿಯರಾದ ಸುರೇಖಾ ಮರಕುಂಬಿ, ಎ.ಎನ್. ನಮಾಜಿ ಮುಂತಾದವರಿದ್ದರು.