ಗಣಾಚಾರ ಪ್ರಶಸ್ತಿ ಪ್ರದಾನ ಸಮಾರಂಭ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಳಕಲ್ಲಿನ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠದಲ್ಲಿ ಜರುಗಿದ ಶ್ರೀ ಅಂಬಿಗ ಚೌಡಯ್ಯ ಹಾಗೂ ಶ್ರೀ ಅಂಬಿಗ ಕುಮಾರ ಚೌಡಯ್ಯ ಶರಣರ ಗಣಾಚಾರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣಾಚಾರ ಪ್ರಶಸ್ತಿ ಪುರಸ್ಕೃತರಾದ ಬಸವನಬಾಗೇವಾಡಿಯ ಶರಣ ಲಕ್ಷ್ಮಣ ಆರ್.ಗೊಳಸಂಗಿ ಹಾಗೂ ಇಂಡಿಯ ಶರಣೆ ಪಾರ್ವತಿ ಸೊನ್ನದರವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ರಾಮದುರ್ಗದ `ಬಸವ ಬೆಳಗು’ ಪತ್ರಿಕೆಯ ಗೌರವ ಸಂಪಾದಕ ಪ್ರೊ. ಸಿದ್ದಣ್ಣ ಲಂಗೋಟಿ ಮಾತನಾಡಿ, ಶರಣರು 12ನೇ ಶತಮಾನದ ಬಸವಾದಿ ಶರಣರ ಪರಂಪರೆಯ ಬಳಿಹಿಡಿದು 20-21ನೇ ಶತಮಾನದವರೆಗೆ ಅನೇಕ ಆಧುನಿಕ ವಚನಕಾರರು ಬಸವಾದಿ ಶರಣರ ವಚನಗಳನ್ನು ಅಧ್ಯಯನ ಮಾಡಿ ಅರಿತು-ಆಚಾರ-ಅನುಭಾವದಿಂದ ವಚನಗಳನ್ನು ರಚಿಸುತ್ತಿದ್ದಾರೆ. ವಚನ ಸಾಹಿತ್ಯ ಚಲನಶೀಲ ಅನುಭಾವ ಸಾಹಿತ್ಯವಾಗಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ಪ.ಗು. ಸಿದ್ದಾಪುರ ಶರಣರು ಮಾತನಾಡಿದರು. ತ್ರಿಪದಿ ತೀರ್ಥ ಮತ್ತು ವಿಶ್ವಗುರು ಬಸವಣ್ಣನವರ ವಚನಗಳು ಗ್ರಂಥಗಳು ಪೂಜ್ಯ ಶ್ರೀ ಡಾ. ಸಿದ್ದರಾಮ ಬೆಲ್ದಾಳ ಶರಣರಿಂದ ಲೋಕಾರ್ಪಣೆಗೊಂಡವು.

ಸಮಾರಂಭದ ದಿವ್ಯ ನೇತೃತ್ವ ವಹಿಸಿದ್ದ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಬಸವಲಿಂಗ ಸ್ವಾಮಿಗಳವರು ಅಂಬಿಗ ಚೌಡಯ್ಯ ಶರಣರ ವಚನಾನುಭಾವ ನುಡಿದರು. ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಮ.ನಿ.ಪ್ರ. ಗುರುಮಹಾಂತಸ್ವಾಮಿಗಳವರು ಬಸವಾದಿ ಶರಣರ ಪರಂಪರೆ ನಡೆದುಬಂದ ದಾರಿಯ ಕುರಿತು ಅನುಭಾವ ನೀಡಿದರು. ಪೂಜ್ಯ ಶ್ರೀ ನವಲಿಂಗ ಶರಣರು, ಪೂಜ್ಯ ಮಾತೆ ಸತ್ಯಕ್ಕ ತಾಯಿಯವರು, ಪೂಜ್ಯ ಶ್ರೀ ಮನಗೂಳಿ ವಿರಕ್ತ ಮಠದ ಸ್ವಾಮೀಜಿಗಳು, ಎಸ್.ವಾಯ್. ಗದಗ ಶರಣರು ಉಪಸ್ಥಿತರಿದ್ದರು.

ಶರಣೆ ಕಲಾಶ್ರೀ ಕ್ಯಾರಕೊಪ್ಪ ಸ್ವಾಗತಿಸಿದರು. ಶರಣ ಸಂಗನಬಸವನಶ್ರೀಪಾದ ಹಾದಿಮನಿಯವರು ಕಾರ್ಯಕ್ರಮ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here