ದೊಡ್ಡಮೇಟಿ ಸ್ಮಾರಕ ಭವನ ಶೀಘ್ರವೇ ನಿರ್ಮಾಣ : ಜಿ.ಎಸ್. ಪಾಟೀಲ

0
``Gandhi Walk'' programme
Spread the love

ವಿಜಯಸಾಕ್ಷಿ ಸುದ್ದಿ, ರೋಣ : ನಾಡು ಕಂಡ ಅಪ್ರತಿಮ ದೇಶ ಪ್ರೇಮಿ ದಿ.ಅಂದಾನಪ್ಪ ದೊಡ್ಡಮೇಟಿಯವರ ಸ್ಮಾರಕ ಭವನವನ್ನು 10 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಈಗಾಗಲೇ ಆಡಳಿತಾತ್ಮಕ ಮಂಜೂರಾತಿ ಪಡೆಯಲಾಗಿದೆ ಎಂದು ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.

Advertisement

ಅವರು ಬುಧವಾರ ಜಕ್ಕಲಿ ಹಾಗೂ ಬೂದಿಹಾಳ ಗ್ರಾಮದಲ್ಲಿ ಜರುಗಿದ ರಾಷ್ಟçಪಿತ ಮಹಾತ್ಮ ಗಾಂಧಿಯವರ 155ನೇ ಜಯಂತ್ಯುತ್ಸವದ ನಿಮಿತ್ತ ಜರುಗಿದ `ಗಾಂಧಿ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದಿ.ಅಂದಾನಪ್ಪ ದೊಡ್ಡಮೇಟಿಯವರು ನಾಡಿಗೆ ಹಾಗೂ ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹನೀಯರ ಸಾಧನೆ ಹಾಗೂ ದೇಶಪ್ರೇಮ ಮುಂದಿನ ಪೀಳಿಗೆಗೆ ಪಸರಿಸಬೇಕು ಎಂಬ ದೃಷ್ಟಿಯಿಂದ ಗ್ರಾಮದಲ್ಲಿ ಸ್ಮಾರಕ ಭವನವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಅಧ್ಯಕ್ಷತೆಯನ್ನು ವೀರಣ್ಣ ಶೆಟ್ಟರ ವಹಿಸಿದ್ದರು. ಬೂದಿಹಾಳ ಗ್ರಾಮದಿಂದ ಜರುಗಿದ ಗಾಂಧಿ ನಡಿಗೆಯಲ್ಲಿ ಗಾಂಧಿ ವೇಷಧಾರಿ ಮುತ್ತಣ್ಣ ತಿರ್ಲಾಪೂರ ಭಾಗಿಯಾಗುವ ಮೂಲಕ 1.5 ಕಿಮೀ ಕಾಲ್ನಡಿಗೆಗೆ ವಿಶೇಷ ಮೆರುಗು ನೀಡಿದರು. ಬೂದಿಹಾಳ ಗ್ರಾಮದಿಂದ ಜರುಗಿದ ಪಾದಯಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾದರು.

ಮಾರ್ಗ ಮಧ್ಯದಲ್ಲಿ ದಿ.ಅಂದಾನಪ್ಪ ದೊಡ್ಡಮೇಟಿಯವರ ಸಮಾಧಿ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಗೌರವ ಸಲ್ಲಿಸಲಾಯಿತು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾಸಕ ಜಿ.ಎಸ್. ಪಾಟೀಲ ನಮನ ಸಲ್ಲಿಸಿದರು. ಇದೇ ಸಂಧರ್ಭದಲ್ಲಿ ಮಾರನಬಸರಿ ಗ್ರಾ.ಪಂ ಪೌರ ಕಾರ್ಮಿಕರನ್ನು ಶಾಸಕರು ಸನ್ಮಾನಿಸಿದರು.

ಐ.ಎಸ್. ಪಾಟೀಲ, ಸಂಗನಗೌಡ ಪಾಟೀಲ, ಅಕ್ಷಯ ಪಾಟೀಲ, ಸಂದೇಶ ದೊಡ್ಡಮೇಟಿ, ಎಸ್.ಎಚ್. ಸೋಂಪುರ, ಮುತ್ತು ಮೇಟಿ, ರಾಜು ಮುಗುಳಿ, ಅಂದಪ್ಪ ಬಿಚ್ಚೂರ, ಯಲ್ಲಪ್ಪಗೌಡ್ರ, ಗೀತಾ ಮಾಡಲಗೇರಿ, ದುರ್ಗಪ್ಪ ಹಿರೇಮನಿ, ಯೂಸುಪ್ ಇಟಗಿ, ಮುತ್ತಣ್ಣ ಸಂಗಳದ, ಸಂಗು ನವಲಗುಂದ, ಮಲಿಕ ಕುರ್ತುಕೋಟಿ, ಸಂಜಯ ದೊಡ್ಡಮನಿ, ಮೌನೇಶ ಹಾದಿಮನಿ, ಶಿವು ಹುಲ್ಲೂರ, ಮಂಜುಳಾ ಹುಲ್ಲಣ್ಣವರ, ನಾಜಬೇಗಂ ಯಲಿಗಾರ, ಖಾಧಿರಸಾಬ ಸಂಕನೂರ, ಮಲ್ಲು ರಾಯನಗೌಡ್ರ, ವಿನಾಯಕ ಜಕ್ಕಣಗೌಡ್ರ, ಮಂಜುನಾಥ ಪೂಜಾರ ಸೇರಿದಂತೆ ರೋಣ, ಜಕ್ಕಲಿ, ನರೆಗಲ್ಲ, ಗಜೇಂದ್ರಗಡ, ಮಾರನಬಸರಿ, ನಡಗುಂದಿ,ಬೂದಿಹಾಳ, ಅಬ್ಬಿಗೇರಿ ಗ್ರಾಮಗಳ ಮುಖಂಡರು ಹಾಗೂ ನಾಗರಿಕರು ಪಾಲ್ಗೊಂಡಿದ್ದರು.

ರಾಷ್ಟçಪಿತ ಮಹಾತ್ಮ ಗಾಂಧಿಯವರು ಜಕ್ಕಲಿ ಗ್ರಾಮಕ್ಕೆ ಆಗಮಿಸಿದ್ದು ಇತಿಹಾಸವಾಗಿದೆ. ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಮಹನೀಯರು ನಾಡು-ನುಡಿಯ ಪ್ರೇಮವನ್ನು ಮೆರೆದಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದ ಅವರು, ನಾಗರಿಕ ಸಮುದಾಯ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

 


Spread the love

LEAVE A REPLY

Please enter your comment!
Please enter your name here