ಬೆಂಗಳೂರು:- ಬುಧವಾರ ಅಂದ್ರೆ ಆಗಸ್ಟ್ 27, 2025 ರಂದು ನಗರದಾದ್ಯಂತ ಒಟ್ಟು 2.19 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರಿ/ಮೊಬೈಲ್ ಟ್ಯಾಂಕರ್‌ಗಳು ಹಾಗೂ ಕೆರೆ ಅಂಗಳದ ಕಲ್ಯಾಣಿಗಳಲ್ಲಿ ಈ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿತ್ತು.
ಬಿಬಿಎಂಪಿ ಬಿಡುಗಡೆ ಮಾಡಿದ ದತ್ತಾಂಶವು ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗಳನ್ನು ಖಚಿತಪಡಿಸಿಕೊಳ್ಳುವಲ್ಲಿ ಪಾಲಿಕೆಯ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ. ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಮೂರ್ತಿಗಳ ವಿಸರ್ಜನೆ ದಾಖಲಾಗಿದ್ದು, ನಂತರದ ಸ್ಥಾನದಲ್ಲಿ ಪಶ್ಚಿಮ ವಲಯವಿದೆ.
ವಲಯವಾರು ವಿಸರ್ಜನೆಯ ವಿವರಗಳು:
ದಕ್ಷಿಣ ವಲಯ: 79,039
ಪಶ್ಚಿಮ ವಲಯ: 60,703
ಪೂರ್ವ ವಲಯ: 44,000
ಆರ್.ಆರ್. ನಗರ ವಲಯ: 13,097
ಯಲಹಂಕ ವಲಯ: 8,492
ಬೊಮ್ಮನಹಳ್ಳಿ ವಲಯ: 7,028
ಮಹದೇವಪುರ ವಲಯ: 5,690
ದಾಸರಹಳ್ಳಿ ವಲಯ: 1,104
ಈ ಉಪಕ್ರಮವು ಪರಿಸರ ಸಂರಕ್ಷಣೆ ಮತ್ತು ನಗರದ ಕೆರೆಗಳನ್ನು ಸ್ವಚ್ಛವಾಗಿಡುವ ದೊಡ್ಡ ಅಭಿಯಾನದ ಭಾಗವಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.