ಬೆಂಗಳೂರು: ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಸಂಭ್ರಮ ಬೆಂಗಳೂರು ನಗರದಲ್ಲಿ ಮನೆ ಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಗಣೇಶನನ್ನು ಸ್ವಾಗತಿಸಲು ನಗರದ ಜನತೆಯ ಸಜ್ಜಾಗಿದ್ದಾರೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಣಿ ಶಾಂತಿ ಸಭೆ ನಡೆಸಲಾಗಿದೆ. ಹಬ್ಬಗಳ ಆಯೋಜಕರು, ಎರಡು ಕೋಮುಗಳ ಮುಖಂಡರ ಜತೆ ಸಭೆ ಮಾಡಲಾಗಿದ್ದು, ಗಣೇಶೋತ್ಸವ, ಈದ್ ಮಿಲಾದ್ ಆಚರಣೆ ನಿಯಮಗಳ ಪಾಲನೆಗೆ ಸೂಚಿಸಲಾಗಿದೆ ಎಂದರು.
ಇನ್ನೂ ಉತ್ಸವಗಳು, ಮೆರವಣಿಗೆಗಳಿಗೆ ನಿಗಧಿತ ರಸ್ತೆಗಳ ಸೂಚಿಸಿಲಾಗಿದ್ದು,, ಭದ್ರತಾ ದೃಷ್ಟಿಯಿಂದ ಆ ನಿಗದಿತ ರಸ್ತೆಗಳಲ್ಲಿ ಸಿಟಿವಿಗಳ ಅಳವಡಿಕೆಗೆ ಸೂಚಿಸಲಾಗಿದೆ. ಮೆರವಣಿಳೆ ವೇಳೆ ಕೋಮುಭಾವನೆ ಕೆರಳಿಸುವ ಘೋಷಣೆಗಳನ್ನು ಕೂಗಬಾರದು. ಬ್ಯಾನರ್, ಫ್ಲೆಕ್ಸ್ ಗಳನ್ನು ಅನುಮತಿ ಪಡೆಯಬೇಕೆಂದು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದಾರೆ.