ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ರಂಗಮಂದಿರದ ಶ್ರೀ ಗಜಾನನೋತ್ಸವ ಸೇವಾ ಸಮಿತಿಯ ವತಿಯಿಂದ ಕುಂದಾಪುರದ ಚಂಡೆ–ಮದ್ದಳೆ ವಾದ್ಯಗಳೊಂದಿಗೆ ವಿಜೃಂಭಣೆಯೊಂದಿಗೆ ಗಣೇಶ ವಿಸರ್ಜನೆವನ್ನು ಗ್ರಾಮದ ಕೆರೆಯಲ್ಲಿ ನೆರವೇರಿಸಲಾಯಿತು.
ಮೆರವಣಿಗೆಗೆ ಚಾಲನೆ ನೀಡಿದ ಮುಖಂಡ ಬಿ.ಡಿ. ಪಲ್ಲೇದ ಮಾತನಾಡಿ, “ಆಧುನಿಕ ಭರಾಟೆಯಲ್ಲಿ ಗಣೇಶ ವಿಸರ್ಜನೆಗೆ ಡಿಜೆ ಬಳಸುವದು ಶಬ್ದ ಮಾಲಿನ್ಯದ ಜೊತೆಗೆ ಸಾರ್ವಜನಿಕರಿಗೂ ಕಿರಿಕಿರಿಯಾಗಿ ಪರಿಣಮಿಸುತ್ತದೆ. ಇದನ್ನು ತಪ್ಪಿಸುವ ಸಲುವಾಗಿ, ನಮ್ಮ ಸನಾತನ ಪರಂಪರೆಯನ್ನು ಬಿಂಬಿಸುವ ಚಂಡೆ–ಮದ್ದಳೆ ವಾದ್ಯಗಳನ್ನು ಇಂದಿನ ಯುವಕರಿಗೆ ಪರಿಚಯಿಸುವ ಕೆಲಸವನ್ನು ಸಮಿತಿಯು ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಇಂತಹ ಜಾನಪದ ಕಲೆಯನ್ನು ಉತ್ಸವಗಳಲ್ಲಿ ಪರಿಚಯಿಸುವ ಕೆಲಸ ಮಾಡಲಾಗುವುದು,” ಎಂದರು.
ಪಿಎಸ್‌ಐ ಚನ್ನಯ್ಯ ದೇವೂರ ಮತ್ತು ಸಿಬ್ಬಂದಿಯವರು ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಶಿವಾನಂದ ಕೋಳಿವಾಡ, ಶಿವಾನಂದ ಮುಳಗುಂದ, ನಿಂಗಪ್ಪ ಕೋಳಿವಾಡ, ಮಂಜುನಾಥ ಪಾಟೀಲ, ಓಂಕಾರೇಶ ಗದಗ, ಪ್ರಕಾಶ ಕಮ್ಮಾರ, ಮಾದೇವಪ್ಪ ಅಣ್ಣಿಗೇರಿ, ಚನ್ನಪ್ಪ ನಿಡುವಣಿ, ಬಸನಗೌಡ ಬಂಡಿ, ಫಕ್ಕೀರೇಶ ಪಾಟೀಲ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


