ಬೆಂಗಳೂರು: ಕಳ್ಳತನ, ದರೋಡೆ ಪ್ರಕರಣಗಳು ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಡ್ಡಿ ಗ್ಯಾಂಗ್, ಇರಾನಿ ಗ್ಯಾಂಗ್ ರೀತಿ ಇದೀಗ ಬೆಂಗಳೂರಿಗೆ ಮತ್ತೊಂದು ದರೋಡೆ ಗ್ಯಾಂಗ್ ಎಂಟ್ರಿಯಾಗಿದೆ. ಹೌದು ಹೊಸಕೋಟೆಯಿಂದ ಕೆಜಿಎಫ್ ಮಾರ್ಗದಲ್ಲಿ ವೇಗವಾಗಿ ಬರೋ ಕಾರ್ ಗಳನ್ನೇ ಟಾರ್ಗೆಟ್ ಮಾಡಿ ಹೈವೇ ಮಧ್ಯೆ ಕಲ್ಲಿಟ್ಟು ಆ್ಯಕ್ಸಿಡೆಂಟ್ ಮಾಡಿಸಿ ಲೂಟಿ ಮಾಡುತ್ತಿದ್ದಾರೆ.
ಕಳೆದ 25 ತಾರೀಖಿನಂದು ಮೂರಕ್ಕೂ ಹೆಚ್ಚು ಸಾವಾಗಿರೋ ಮಾಹಿತಿ ಲಭ್ಯವಾಗಿದೆ. ಹೈವೇದಲ್ಲಿ ಹೊಸಕೋಟೆಯಿಂದ ಕೆಜಿಎಫ್ ಮಾರ್ಗದಲ್ಲಿ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ವಕೀಲ ಹುಸೇನ್ ಓವೈಸಿ ಯವರಿಂದ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಡಿಜಿ ಐಜಿಪಿ,ಹೈವೇ ಅಥಾರಿಟಿ, ಹೈವೇ ಚೀಫ್ ಇಂಜಿನಿಯರ್ ಗೆ ದೂರು ನೀಡಿದ್ದಾರೆ.
ಮಧ್ಯೆ ಹೈವೇದಲ್ಲಿ ಕಲ್ಲಿಟ್ಟು ಡಿವೈಡರ್ ಮೇಲೆ ಕುಳಿತು ಗ್ಯಾಂಗ್ ವಾಚ್ ಮಾಡುತ್ತೆ. ಒಂದು ಕಾರು ತಪ್ಪಿದರೆ ಕಲ್ಲು ಸ್ಥಳಾಂತರ ಮಾಡಿ ಇನ್ನೊಂದು ಕಾರಿಗೆ ಸ್ಕೆಚ್ ಹಾಕುತ್ತೆ. ಆರೋಪಿಗಳ ಚಲನವಲನ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮ್ ಅಲ್ಲಿ ಸೆರೆಯಾಗಿದೆ. ಈ ರೀತಿ ಕೃತ್ಯಗಳು ನಡೆಯಲು ಹೈವೇಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.