ಕೋಲ್ಕತ್ತಾ: ಬಾಗಲಕೋಟೆ ಮೂಲದ ಎಂ.ಬಿ.ಎ ವಿದ್ಯಾರ್ಥಿ ಪರಮಾನಂದ ಟೋಪಣ್ಣನವರ್ ಎಂಬಾತನನ್ನು, ಯುವತಿಗೆ ಹಾಸ್ಟೆಲ್ಗೆ ಕರೆಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ಈತನನ್ನು ಜುಲೈ 12ರಂದು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.
ಪರಮಾನಂದ, ಕೋಲ್ಕತ್ತಾ ನಗರದ ಜೋಕಾ ಪ್ರದೇಶದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದು, ಆರೋಪ ಪ್ರಕಾರ ಯುವತಿಗೆ ಆಹಾರ ಹಾಗೂ ಪಾನೀಯ ನೀಡಿದ ಬಳಿಕ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಆದರೆ, ಯುವತಿಯ ಕುಟುಂಬಸ್ಥರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸತ್ಯಾಂಶ ಬಹಿರಂಗವಾಗಲು ಇನ್ನಷ್ಟು ತನಿಖೆ ಅಗತ್ಯವಾಗಿದೆ.
ಸದ್ಯ ಪ್ರಕರಣದ ಸತ್ಯವನ್ನು ಬಯಲಿಗೆ ತರುವ ಉದ್ದೇಶದಿಂದ ಕೋಲ್ಕತ್ತಾ ಪೊಲೀಸರು 9 ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ವಿದ್ಯಾಸಂಸ್ಥೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಸಂಗ್ರಹಿಸಲಾಗುತ್ತಿದೆ.
ಬಂಧಿತನ ಬಂಧನದ ವಿಷಯವನ್ನು ಸ್ನೇಹಿತರು ಕುಟುಂಬಕ್ಕೆ ತಿಳಿಸಿದ್ದರಿಂದ, ಪರಮಾನಂದನ ಪೋಷಕರು ಈಗಾಗಲೇ ಕೋಲ್ಕತ್ತಾಗೆ ಪ್ರಯಾಣ ಬೆಳೆಸಿದ್ದಾರೆ. ಪೊಲೀಸರು ಈ ಕುರಿತು ಇನ್ನಷ್ಟು ಮಾಹಿತಿಗಾಗಿ ತನಿಖೆ ಮುಂದುವರೆಸಿದ್ದಾರೆ.