ಕೊಪ್ಪಳ:- ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದಲ್ಲಿ ನಾಲ್ವರು ಕಾಮುಕರನ್ನು ಯಲಬುರ್ಗಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಲಕ್ಷ್ಮಣ, ಬಸವರಾಜ್, ಮುತ್ತುರಾಜ್, ಶಶಿಕುಮಾರ್ ಎಂದು ಗುರುತಿಸಲಾಗಿದೆ. ಭಾನುವಾರ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ಲೂರ ಸಮೀಪ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪಾಳು ಬಿದ್ದ ಮನೆಯಲ್ಲಿ ಮದ್ಯ ಸೇವಿಸಿ ಆರೋಪಿಗಳು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದರು.
ಸಂತ್ರಸ್ತೆಗೆ ಪರಿಚಯವಿದ್ದ ಲಕ್ಷ್ಮಣ ಆಕೆಗೆ 5,000 ಹಣ ಕೊಡಬೇಕಾಗಿತ್ತು. ಹಣ ಕೊಡುತ್ತೇನೆಂದು ಮಹಿಳೆಯನ್ನು ಕುಷ್ಟಗಿಗೆ ಕರೆಸಿಕೊಂಡಿದ್ದ. ಆರೋಪಿ ಸಂತ್ರಸ್ತೆಯನ್ನು ಅಲ್ಲಿಂದ ಬೈಕ್ನಲ್ಲಿ ಕರೆದುಕೊಂಡು ಹೋಗಿ ಅಲ್ಲಿಂದ ಇನ್ನು ಮೂರು ಜನ ಸೇರಿ ಜೂಸ್ ಅಂತಾ ಏನೋ ಕುಡಿಸಿ ಅತ್ಯಾಚಾರವೆಸಗಿದ್ದರು. ಘಟನೆ ಸಂಬಂಧ ಸಂತ್ರಸ್ತೆ ನೀಡಿದ ದೂರಿನನ್ವಯ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.



