ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಮಾರ್ಕೆಟ್ ಬಳಿ ನಡೆದಿದ್ದ ಅಂತರಾಜ್ಯ ಮಹಿಳೆ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಮುಕರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆ.ಆರ್ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್, ಶರವಣ ಬಂಧಿತ ಕಾಮುಕರು.
ಘಟನೆ ಹಿನ್ನೆಲೆ:-
ಕಳೆದ ಭಾನುವಾರ ಸಿಲಿಕಾನ್ ಸಿಟಿ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯಲ್ಲಿ ಈ ನೀಚ ಕೃತ್ಯ ಒಂದು ನಡೆದಿತ್ತು. ಸಂತ್ರಸ್ತ ಮಹಿಳೆ ತಮಿಳುನಾಡಿನಿಂದ ಬೆಂಗಳೂರಿನ ಅಣ್ಣನ ಮನೆಗೆ ಬಂದಿದ್ದರು.
ಕೆ.ಆರ್ ಮಾರುಕಟ್ಟೆಯಲ್ಲಿ ಯಲಹಂಕ ಬಸ್ಗಾಗಿ ಮಹಿಳೆ ಕಾಯುತ್ತಿದ್ದರು. ಈ ವೇಳೆ, ಯಲಹಂಕ ಬಸ್ಗಾಗಿ ಆರೋಪಿಗಳನ್ನ ಮಹಿಳೆ ವಿಚಾರಿಸಿದ್ದಾರೆ. ಬಸ್ ತೋರಿಸುತ್ತೇವೆಂದು ಗೋಡೌನ್ ಸ್ಟ್ರೀಟ್ಗೆ ಕರೆದೊಯ್ದು ಆರೋಪಿಗಳು ಅತ್ಯಾಚಾರ ಎಸಗಿದ್ದರು.
ಅತ್ಯಾಚಾರ ಬಳಿಕ ಮಹಿಳೆಯ ಮೊಬೈಲ್, ಹಣ, ತಾಳಿ, ಚಿನ್ನ ಕದ್ದು ಪರಾರಿಯಾಗಿದ್ದರು. ಘಟನೆ ಸಂಬಂಧ ಸಂತ್ರಸ್ತ ಮಹಿಳೆಯು ಬೆಂಗಳೂರು ಕೇಂದ್ರ ಮಹಿಳಾ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.