ಕುಂದಾ ಸಿಗುತ್ತಿದ್ದ ನಗರದಲ್ಲಿ ಈಗ ಗಾಂಜಾ ಹಾವಳಿ: 6 ತಿಂಗಳಲ್ಲಿ ಸಿಕ್ಕ ಮಾದಕವಸ್ತು ಎಷ್ಟು!?

0
Spread the love

ಬೆಳಗಾವಿ:- ಬರೀ ಕುಂದಾ ಸಿಗುತ್ತಿದ್ದ ಬೆಳಗಾವಿ ನಗರದಲ್ಲಿ ಈಗ ಗಾಂಜಾದ ಘಾಟು ಜೋರಾಗಿದೆ. ಕಳೆದ 6 ತಿಂಗಳಲ್ಲಿ ಬರೋಬ್ಬರಿ 110ಕೆಜಿ ಗಾಂಜಾ ಮತ್ತು 700ಗ್ರಾಂ ಬೇರೆ ಬೇರೆ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಕ್ಕೆ ಹೊಂದಿಕೊಂಡಿರುವ ಬೆಳಗಾವಿ ನಗರದಲ್ಲಿ ಕುಂದಾದಂತೆ ಎಲ್ಲೆಂದರಲ್ಲಿ ಗಾಂಜಾ ಸಿಗುತ್ತಿದೆ. ಡ್ರಗ್ಸ್ ಮಾರಾಟ ಮಾಡುವುದನ್ನೇ ಬಿಜಿನೆಸ್ ಮಾಡಿಕೊಂಡಿರುವ ದುಷ್ಕರ್ಮಿಗಳು, ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡ್ತಿರುವುದು ಬೆಳಕಿಗೆ ಬಂದಿದೆ.

Advertisement

ನಗರದಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ ಬೇರೆ ಬೇರೆ ವಿಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಗಾಂಜಾ ಮಾರಾಟ ಮಾಡುತ್ತಿರುವ ಸಂಶಯದಲ್ಲಿ ಬೆಳಗಾವಿ ನಗರ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಗಾಂಜಾ ಮಾರಾಟ ಮಾಡ್ತಿದ್ದ ಇಬ್ಬರು ಆರೋಪಿಗಳನ್ನ ಮಾಳಮಾರುತಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಇನ್ನು ಆರು ತಿಂಗಳ ಅವಧಿಯಲ್ಲಿ ಸುಮಾರು 110ಕೆಜಿ ಗಾಂಜಾ ಮತ್ತು 700ಗ್ರಾಂ ಬೇರೆ ಬೇರೆ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ.

ಗಾಂಜಾ, ಡ್ರಗ್ಸ್ ಹಾವಳಿ ನಡುವೆ ಬೆಳಗಾವಿಗೆ ಮತ್ತೊಂದು ಡೆಂಜರಸ್ ಡ್ರಗ್ಸ್ ಎಂಟ್ರಿಯಾಗಿದೆ. ಹೆರಾಯಿನ್ ಹೆಸರಿನ ಡ್ರಗ್ಸ್ ಇದೀಗ ಬೆಳಗಾವಿ ನಗರದಲ್ಲಿ ಸಪ್ಲೈ ಮಾಡಲಾಗುತ್ತಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಎಲ್ಲ ಠಾಣೆಗಳಿಗೆ ಸೂಚನೆ ನೀಡಿದ್ದರು. ಡ್ರಗ್ಸ್ ಹಾವಳಿ ಕಂಟ್ರೋಲ್ ಮಾಡುವುದಕ್ಕೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುವಂತೆ ಸೂಚಿಸಿದ್ದರು. ಈ ಆಧಾರದ ಮೇಲೆ ಆ್ಯಕ್ಟೀವ್ ಆಗಿದ್ದ ಟಿಳಕವಾಡಿ ಠಾಣೆ ಪೊಲೀಸರು ಹೆರಾಯಿನ್ ಸಪ್ಲೈ ಮಾಡುತ್ತಿದ್ದ ಐದು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಶಾಂತ್ ಕಂಗ್ರಾಳ್ಕರ್, ನಾರಾಯಣ್ ಪಾಟೀಲ್, ಪ್ರಫುಲ್ ಪಾಟೀಲ್, ಸುನೀಲ್ ಅಸಲ್ಕರ್, ಸಲ್ಮಾನ್ ಮುಕಾಶಿ ಬಂಧಿಸಿ 5ಗ್ರಾಂ 150ಮಿಲಿಗ್ರಾಂ ಹೆರಾಯಿನ್ ಕೂಡ ಜಪ್ತಿ ಮಾಡಿದ್ದಾರೆ. ಇನ್ನೂ ನಗರದಲ್ಲಿ ಡ್ರಗ್ಸ್ ಕಂಟ್ರೋಲ್ ಮಾಡಲು ವಿಶೇಷ ತಂಡ ರಚನೆ ಮಾಡಲಾಗುವುದು ಜೊತೆಗೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕೂಡ ಮೂಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here