ಗಂಜಿ ಬಸವೇಶ್ವರ ಜಾತ್ರಾ ಮಹೋತ್ಸವ ಇಂದು

0
ganji
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಉಸುಗಿನಗಟ್ಟಿ ಓಣಿಯ ಶ್ರೀ ಗಂಜಿ ಬಸವೇಶ್ವರ ದೇವರ 62ನೇ ವರ್ಷದ ಜಾತ್ರಾ ಮಹೋತ್ಸವ ಮೇ. 10ರಂದು ನೆರವೇರಲಿದೆ.

Advertisement

ಅಂದು ಬೆಳಿಗ್ಗೆ 8 ಗಂಟೆಗೆ ಮಹಾರುದ್ರಾಭಿಷೇಕ, ಜಗಜ್ಯೋತಿ ಬಸವೇಶ್ವರ ಹಾಗೂ ಜಗದ್ಗುರು ಏಕೋರಾಮಾರಾಧ್ಯರ ಭಾವಚಿತ್ರಗಳೊಂದಿಗೆ ನೂರಾರು ಜೋಡಿ ಎತ್ತುಗಳ ಭವ್ಯ ಮೆರವಣಿಗೆಯು ಸಕಲ ವಾದ್ಯ ವೈಭವ, ಕುಂಭಾರತಿಯೊಂದಿಗೆ ಶ್ರೀ ಗಂಜಿ ಬಸವೇಶ್ವರ ಮಂಗಲ ಮೂರ್ತಿಯ ಮಹಾ ಅಂದೋಲಿಕೋತ್ಸವವು ಗದಗ ಶಹರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ನಂತರ ಸಾಯಂಕಾಲ 6 ಗಂಟೆಗೆ ಗಂಜಿ ಬಸವೇಶ್ವರ ಮಹಾರಥೋತ್ಸವ ಜರುಗುವುದು.

ಎಲ್ಲ ಕಾರ್ಯಕ್ರಮಗಳಲ್ಲಿ ಓಣಿಯ ಸಮಸ್ತ ನಾಗರಿಕರು, ಗುರು-ಹಿರಿಯರು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.


Spread the love

LEAVE A REPLY

Please enter your comment!
Please enter your name here