ದೊಡ್ಡಬಳ್ಳಾಪುರ: ಹೊಸ ಮನೆ ಗೃಹ ಪ್ರವೇಶ ವೇಳೆ ಗ್ಯಾಸ್ ಲೀಕ್ ಆಗಿ ಸಿಲಿಂಡರ್ ಸ್ಪೋಟಗೊಂಡು ಆರು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದರ್ಗಾಜೋಗಹಳ್ಳಿಯಲ್ಲಿ ನಡೆದಿದೆ.
Advertisement
ರವಿಕುಮಾರ್ (41) ವರ್ಷಿತಾ (21), ಅನುಸೂಯ(37) ಭಾಗ್ಯಮ್ಮ(55) ,ಚಿರಂತ್(11) ಮಿಥುನ್(14) ಗಾಯಗೊಂಡವರಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಒಂದು ವೇಳೆ ಸಿಲಿಂಡರ್ ಸ್ಪೋಟಗೊಂಡಿದ್ದರೆ ಜೀವ ಹಾನಿ ಆಗುವ ಸಾಧ್ಯತೆ ಹೆಚ್ಚಾಗಿತ್ತು. ಇನ್ನು ಗಾಯಾಳನ್ನು ಸ್ಥಳೀಯರು ಬೆಂಗಳೂರಿಗೆ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಇನ್ನೂ ಬೆಂಕಿಯ ರಭಸಕ್ಕೆ ಹೊಸ ಮನೆಯ ಕಿಟಕಿ ಹೊಡೆದಿದೆ. ಅಲ್ಲದೆ ಮನೆಯ ವಸ್ತುಗಳೆಲ್ಲೂ ಅರೆಬರೆ ಸುಟ್ಟಿವೆ. ಇನ್ನು ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ..