ಚಾಮರಾಜನಗರ:- ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಎಟಿಆರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ದಾಳಿಯಿಂದ ಜರ್ಮನ್ ಪ್ರವಾಸಿಗ ಸಾವಿಗೀಡಾದ ಘಟನೆ ಜರುಗಿದೆ.
Advertisement
77 ವರ್ಷದ ಮೈಕೆಲ್ ಶುಲ್ಜ್ ಮೃತ ಸವಾರ. ಟೈಗರ್ ವ್ಯಾಲಿ ರಸ್ತೆಯಲ್ಲಿ ಬೈಕ್‍ನಲ್ಲಿ ತೆರಳುವಾಗ ಆನೆ ಇರುವುದನ್ನು ಗಮನಿಸಿಯೂ ಅವರು ಸಮೀಪ ಹೋಗಿದ್ದಾರೆ. ಈ ವೇಳೆ ಬೈಕ್ ಸಮೇತ ಅವರನ್ನು ಆನೆ ಎತ್ತಿ ಎಸೆದಿದೆ. ಅವರು ತೀವ್ರ ಗಾಯಗೊಂಡಿದ್ದರು. ಅವರನ್ನು ಪೊಲ್ಲಾಚಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.