ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕೆನರಾ ಬ್ಯಾಂಕ್ ಕಾರ್ಯನಿರತ ನೌಕರರ ಸಂಘದ (ಸಿ.ಬಿ.ಡಬ್ಲೂ.ಇ.ಯು.) ಗದಗ ಜಿಲ್ಲಾ ಮಟ್ಟದ ಅಹವಾಲು ಆಲಿಸುವ ಹಾಗೂ ಸಂಘಕ್ಕೆ ಸೇರ್ಪಡೆಯಾದ ಸದಸ್ಯರನ್ನು ಬರಮಾಡಿಕೊಳ್ಳುವ ಕಾರ್ಯಕ್ರಮವನ್ನು ನಗರದ ಲೋಟಸ್ ಇನ್ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಘದ ರಾಜ್ಯ ಕಾರ್ಯದರ್ಶಿ ಬಸನಗೌಡ ಪಾಟೀಲ ಭಾಗವಹಿಸಿ ಮಾತನಾಡಿ, ಬ್ಯಾಂಕ್‌ನ ಪ್ರಸಕ್ತ ಬೆಳವಣೆಗೆಗಳು ಹಾಗೂ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.

ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಯಚ್ಚರಸ್ವಾಮಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವರಂಜನ ಮಾತನಾಡಿ ಮುಂದಿನ ಕಾರ್ಯತಂತ್ರವನ್ನು ವಿವರಿಸಿದರು.

ಹರೀಶ ಬಾಗಲಕೋಟಿ, ಪ್ರಸನ್ನ ಗರಗ, ಪರಶುರಾಮ ಹಂಜಗಿ, ಮೌಲಾಸಾಬ, ರಾಘವೇಂದ್ರ ಭಜಂತ್ರಿ, ಹೇಮಂತ, ಸತ್ಯಮ್ಮ, ಪಿಗ್ಮಿ ಸಂಗ್ರಹಕಾರರಾದ ವಿರೇಶ ಬಾಗೋಡಿ, ಯಲ್ಲಪ್ಪ ಶೇರಖಾನೆ, ನಿಂಗಪ್ಪ ಪಶುಪತಿಹಾಳ, ನೂರಅಹಮ್ಮದ ಅತ್ತಾರ, ಕಿನ್ನಾಳ, ಜೋಶಿ ಇವರನ್ನು ಸಂಘಕ್ಕೆ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು.

ಅಶೋಕ ಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಪರಶುರಾಮ ರಾಘಣ್ಣವರ ವಂದಿಸಿದರು.


Spread the love

LEAVE A REPLY

Please enter your comment!
Please enter your name here