ಬೆಂಗಳೂರು: ಐತಿಹಾಸಿಕ ಗಾಳಿ ಆಂಜನೇಯಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ನೀಡಿರುವ ಸರ್ಕಾರದ ಕ್ರಮಕ್ಕೆ ತಡೆ ನೀಡಬೇಕು ಎಂಬ ದೇವಾಲಯದ ಟ್ರಸ್ಟ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠ, “ಸರ್ಕಾರದ ಕ್ರಮಕ್ಕೆ ತಡೆಯಾಜ್ಞೆ ನೀಡಲಾಗದು, ದೇವಾಲಯದ ಆಡಳಿತ ಮುಜರಾಯಿ ಇಲಾಖೆಯ ನಿಯಂತ್ರಣದಲ್ಲೇ ಮುಂದುವರೆಯಬೇಕು ಎಂದು ಸ್ಫಷ್ಟ ಆದೇಶ ನೀಡಿದೆ.
ಗಾಳಿ ಆಂಜನೇಯ ದೇವಸ್ಥಾನದ ಟ್ರಸ್ಟ್ ನೀಡಿದ್ದ ಮಧ್ಯಂತರ ತಡೆಯಾಜ್ಞೆ ಅರ್ಜಿ ರದ್ದು ಮಾಡಿದ ಹೈಕೋರ್ಟ್, ಈ ಮೂಲಕ ದೇವಸ್ಥಾನದ ಆಡಳಿತ ಮಂಡಳಿಗೆ ಭಾರೀ ಹಿನ್ನಡೆಯುಂಟುಮಾಡಿದೆ. ದೇವಾಲಯದಲ್ಲಿ ಹಣದ ದುರುಪಯೋಗದ ಆರೋಪಗಳು ಮೇಲ್ನೋಟಕ್ಕೆ ಗಂಭೀರವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದ ಮುಂದಿನ ವಾದ-ಪ್ರತಿವಾದಗಳು ಮುಂದಿನ ಎರಡು ವಾರಗಳ ಕಾಲ ಮುಂದೂಡಲಾಗಿದೆ. ತಾತ್ಕಾಲಿಕವಾಗಿ ದೇವಾಲಯದ ಆಡಳಿತ ಮುಜರಾಯಿ ಇಲಾಖೆ ಅಧೀನದಲ್ಲಿಯೇ ಮುಂದುವರಿಯಲಿದೆ.



