ಗಿಡ್ನಂದಿಯವರ ಕನ್ನಡ ಸೇವೆ ಅನುಪಮ: ಮಾಜಿ ಸಚಿವ ಎಸ್.ಎಸ್. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬರಹಗಾರ, ಸಂಘಟಕ, ಸಂಸ್ಕೃತಿ ಚಿಂತಕರಾಗಿದ್ದ ಶಿವಾನಂದ ಗಿಡ್ನಂದಿ ಅವರ ಅಗಲುವಿಕೆಯ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗಶ್ರೀ ಕನ್ನಡ ಭವನದ ಕಸಾಪ ಕಾರ್ಯಾಲಯದಲ್ಲಿ ಶೃದ್ಧಾಂಜಲಿ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು.

Advertisement

ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಸಾಹಿತ್ಯ ಪರಿಷತ್ತಿನಲ್ಲಿ ಪಾದರಸದಂತೆ ಓಡಾಡಿಕೊಂಡು ಕನ್ನಡ ಸೇವೆಯನ್ನು ಮಾಡಿದ ಪರಿಯನ್ನು ಮುಕ್ತ ಕಂಠದಿಂದ ಹೊಗಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಬರಹಗಾರ ಮತ್ತು ಸಂಘಟಕನಾಗಿ ಕಳೆದ ಮೂವತ್ತು ವರ್ಷಗಳಿಂದ ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಗೆ ಮಾಡಿದ ಸೇವೆ ಅನುಮಪವಾದುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ಪರಿಷತ್ತು, ಶಿಕ್ಷಕರ ಸಂಘಟನೆಯಲ್ಲಿ ಮಾಡಿದ ಸೇವೆಯನ್ನು ಡಾ. ಜಿ.ಬಿ. ಪಾಟೀಲ, ಡಾ. ರಾಜೇಂದ್ರ ಗಡಾದ, ಸಂಗಮೇಶ ದುಂದೂರ, ಎಸ್.ಡಿ. ಗಾಂಜಿ, ಡಾ. ಎಚ್.ಬಿ. ಪೂಜಾರ, ಡಾ. ಆರ್.ಎಲ್. ಹಂಸನೂರ, ಸಿದ್ಧರಾಮೇಶ ಪಟ್ಟೇದ, ಜಿನಗಾ, ಮತ್ತಿತರು ಸ್ಮರಿಸಿದರು.

ಸಭೆಯಲ್ಲಿ ಡಾ. ರಾಜಶೇಖರ ದಾನರಡ್ಡಿ, ಎಸ್.ಯು. ಸಜ್ಜನಶೆಟ್ಟರ, ಡಾ. ರಶ್ಮಿ ಅಂಗಡಿ, ಜೆ.ಎನ್. ಪಾಟೀಲ, ಸತೀಶ ಚನ್ನಪ್ಪಗೌಡ್ರ, ಶಶಿಕಾಂತ ಕೊರ್ಲಹಳ್ಳಿ, ಶಾಂತಕುಮಾರ ಭಜಂತ್ರಿ, ಪಾರ್ವತಿ ಬೇವಿನಮರದ, ಅಕ್ಕಮಹಾದೇವಿ ರೊಟ್ಟಿಮಠ, ಅನಸೂಯಾ ಮಿಟ್ಟಿ, ವಿ.ಎನ್. ಬೇಂದ್ರೆ, ಬಂಗಾರಗುಂಡ ಗುಡದಪ್ಪ, ಪ್ರ.ತೋ. ನಾರಾಯಣಪೂರ, ರಾಜಶೇಖರ ಕರಡಿ, ಶರಣಪ್ಪ ಹೊಸಂಗಡಿ, ಭಾಗ್ಯಶ್ರೀ ಹುರಕಡ್ಲಿ, ಮೊದಲಾದವರು ಉಪಸ್ಥಿತರಿದ್ದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here