ಮಂಡ್ಯ: ಗ್ರಾಮದ ಅಪ್ರಾಪ್ತ ಬಾಲಕರಿಂದ ಕಿರುಕುಳ ಹಿನ್ನೆಲೆ ಮನೆಯಲ್ಲಿ ನೇಣು ಬಿಗಿದುಕೊಂಡು ಬಾಲಕಿ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ. ಇಂಪನ(15) ನೇಣಿಗೆ ಶರಣಾದ ಬಾಲಕಿಯಾಗಿದ್ದು, ಬಾಲಕಿಯನ್ನ ಪ್ರೀತಿಸುವ ವಿಚಾರವಾಗಿ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಅದಲ್ಲದೆ ಪ್ರೀತಿಸುವಂತೆ ಬಾಲಕರು ಒತ್ತಾಯ ಮಾಡಿದ್ದಾರೆ. ಮಾತಿನ ಚಕಮಕಿಯ ಆಡಿಯೋ ವೈರಲ್ ಆಗಿದ್ದು, ಬಾಲಕಿಯ ತಾಯಿಯ ವಾಟ್ಸಪ್ ಗೆ ಬಾಲಕರು ಕಳುಹಿಸಿದ್ದಾರೆ. ಇದರಿಂದ ಮನನೊಂದು ಬಾಲಕಿ ನೇಣಿಗೆ ಶರಣಾಗಿದ್ದಾಳೆ. ಘಟನೆ ನಂತರ ಅಪ್ರಾಪ್ತ ಬಾಲಕರು ಪರಾರಿಯಾಗಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



