ಹುಡುಗಿಯರೇ ಕುಳ್ಳಗಿದ್ದೀನಿ ಅಂತ ಚಿಂತೆ ಮಾಡ್ಬೇಡಿ! ಹುಡುಗರಿಗೆ ಇಷ್ಟ ಆಗೋದು ನೀವೆ!

0
Spread the love

ಯುವಕರು ತಮ್ಮಷ್ಟೇ ಎತ್ತರವಿರುವ ಅಥವಾ ತಮಗಿಂತ ಎತ್ತರವಾಗಿರುವ ಮಹಿಳೆಯರಿಗಿಂತ ಕುಳ್ಳಗಿನ ಯುವತಿಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಇದಲ್ಲದೆ, ಈ ಆಕರ್ಷಣೆಗೆ ಕೆಲವು ಕಾರಣಗಳನ್ನು ಕೂಡ ನೀಡಿದೆ.

Advertisement

ನಾನು ಕುಳ್ಳಿ ನನ್ನನ್ನು ಯಾವ ಹುಡುಗ ಕೂಡ ಇಷ್ಟಪಡೋದಿಲ್ಲ ಅನ್ನೋ ಚಿಂತೆ ಹುಡುಗಿಯರಲ್ಲಿದ್ರೆ ತಕ್ಷಣವೇ ಬಿಟ್ಟುಬಿಡಿ. ಯಾಕೆಂದರೆ, ಇತ್ತೀಚಿನ ಅಧ್ಯಯನವೊಂದು ಸತ್ಯವೊಂದನ್ನು ಬಹಿರಂಗಪಡಿಸಿದೆ. ಉದ್ದ ಇರೋ ಹುಡುಗಿಯರಿಗಿಂತ ಪುರುಷರು, ಕುಳ್ಳಗಿನ ಯುವತಿಯರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರಂತೆ.

ಕುಳ್ಳಗೆ ಇರುವ ಹುಡುಗಿಯರು ನೋಡುವುದಕ್ಕೆ ಕ್ಯೂಟ್ ಆಗಿರುತ್ತಾರೆ. ಅವರು ಒಂದೇ ಒಂದು ಕ್ಷಣದಲ್ಲೇ ಎಲ್ಲರನ್ನು ಸೆಳೆಯುತ್ತಾರೆ ಎನ್ನುವ ಕಾರಣಕ್ಕೆ ಕುಳ್ಳಗೆ ಇರುವ ಹುಡುಗಿಯರನ್ನೇ ಹುಡುಗರು ಇಷ್ಟ ಪಡುತ್ತಾರೆ

ಎತ್ತರವಿರುವ ಹುಡುಗರು ಜೊತೆಯಲ್ಲಿದ್ದರೆ ಕುಳ್ಳಗಿರುವ ಹುಡುಗಿಯರಿಗೆ ಭದ್ರತೆಯ ಭಾವನೆಯಿರುತ್ತದೆ. ತಮ್ಮ ಪ್ರೇಮಿಯನ್ನು ಚೆನ್ನಾಗಿ ನೋಡಬೇಕು, ಆಕೆಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡಬೇಕು ಎನ್ನುವುದು ಹುಡುಗರಲ್ಲಿರುತ್ತದೆ. ಈ ಭಾವನೆಯಿಂದ ಸಂಬಂಧವು ಗಟ್ಟಿಯಾಗಿರುವ ಕಾರಣ ಈ ರೀತಿ ಇರುವ ಹುಡುಗಿಯನ್ನೇ ಇಷ್ಟ ಪಡುತ್ತಾರೆ.

ಕುಳ್ಳಗೆ ಇರುವ ಹುಡುಗಿಯರು ನೋಡುವುದಕ್ಕೆ ಎಷ್ಟು ಮುದ್ದಾಗಿ ಕಾಣಿಸುತ್ತಾರೆಯೋ, ತಬ್ಬಿಕೊಂಡಾಗ ಕಂಫರ್ಟ್‌ ಫೀಲ್‌ ಸಿಗುತ್ತದೆಯಂತೆ. ಹೌದು, ಈ ಕುಳ್ಳಗೆ ಇರುವ ಹುಡುಗಿಯರನ್ನು ಅಪ್ಪಿ ಎದೆಗೊತ್ತಿಕೊಳ್ಳಲು ಕಂಫರ್ಟ್‌ ಆಗುವ ಕಾರಣ ಕುಳ್ಳಿ ಹುಡುಗಿಯರು ಹೆಚ್ಚು ಇಷ್ಟವಾಗುತ್ತಾರಂತೆ.

ಕುಳ್ಳಗೆ ಅಥವಾ ಎತ್ತರ ಕಡಿಮೆಯಿರುವ ಕಾರಣ ಈ ಹುಡುಗಿಯರು ತಮ್ಮ ನಿಜವಾದ ವಯಸ್ಸಿಗಿಂತ ಚಿಕ್ಕವರಂತೆ ಕಾಣಿಸುತ್ತಾರೆ. ಈ ಕಾರಣದಿಂದಲೇ ಹುಡುಗರು ಈ ಕುಳ್ಳಿ ಹುಡುಗಿಯರತ್ತ ಆಕರ್ಷಿಸುತ್ತಾರಂತೆ.

ಕೆಲವು ಕುಬ್ಜ ಹುಡುಗಿಯರು ಸಾಕಷ್ಟು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ತಮ್ಮ ಚುರುಕಾದ ಗುಣದಿಂದ ಎಲ್ಲರ ಗಮನ ಸೆಳೆಯುತ್ತಾರೆ. ಆತ್ಮವಿಶ್ವಾಸವು ಹೆಚ್ಚಿರುವ ಕಾರಣ ಎಲ್ಲಾ ಕೆಲಸ ಕಾರ್ಯಗಳನ್ನು ಅಚ್ಚು ಕಟ್ಟಾಗಿ ಮಾಡಿ ಮುಗಿಸುತ್ತಾರೆ. ಈ ಗುಣದಿಂದಲೇ ಕುಬ್ಜ ಹುಡುಗಿಯರು ಹುಡುಗರಿಗೆ ಇಷ್ಟವಾಗುವುದೇ ಹೆಚ್ಚು ಎನ್ನಬಹುದು.

ಎತ್ತರವಿರುವ ಹುಡುಗಿಯರಿಗೆ ಹೋಲಿಸಿದರೆ ಕುಳ್ಳಗೆ ಇರುವ ಹುಡುಗಿಯರು ಪ್ರೀತಿಯ ವಿಷಯದಲ್ಲಿ ಹಾಗೂ ಸಂಬಂಧದಲ್ಲಿ ಹೆಚ್ಚು ಗಂಭೀರವಾಗಿರುತ್ತಾರೆ. ಹಾಗೂ ತನ್ನ ಪ್ರೇಮಿಯನ್ನು ಹೆಚ್ಚು ಕಾಳಜಿ ವಹಿಸುತ್ತಾರೆ. ಈ ಗುಣವೇ ಪುರುಷರು ಈ ಹುಡುಗಿಯರತ್ತ ಆಕರ್ಷಿತರಾಗುವಂತೆ ಮಾಡುತ್ತದೆ.


Spread the love

LEAVE A REPLY

Please enter your comment!
Please enter your name here