ಬಾಲಕಿಯರ ಪ್ರೌಢಶಾಲೆ ಫಲಿತಾಂಶ ಶೇ.64.93

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಶೇ 64.93 ಆಗಿದೆ.

Advertisement

ಪರೀಕ್ಷೆಗೆ ಹಾಜರಾದ 77 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎ+ ಗ್ರೇಡ್‌ನಲ್ಲಿ 8 ವಿದ್ಯಾರ್ಥಿಗಳು, ಎ ಗ್ರೇಡಿನಲ್ಲಿ 7, ಬಿ+ ಗ್ರೇಡಿನಲ್ಲಿ 8, ಡಿ ಗ್ರೇಡಿನಲ್ಲಿ 12, ಸಿ+ ಗ್ರೇಡಿನಲ್ಲಿ 10, ಸಿ ಗ್ರೇಡಿನಲ್ಲಿ 5 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.

ಪ್ರಥಮ ಸ್ಥಾನ ಗಾಯತ್ರಿ ಹಳ್ಳಿ-ಶೇ. 96.16, ದ್ವಿತೀಯ ಸ್ಥಾನ ರೋಹಿಣಿ ಮಾಡಲಗೇರಿ-ಶೇ. 94.49 ಹಾಗೂ ತೃತೀಯ ಸ್ಥಾನ ಶಿವಲೀಲಾ ಅಬ್ಬಿಗೇರಿ ಶೇ. 94.24 ಅಂಕ ಗಳಿಸಿದ್ದಾರೆ. ವಿಶೇಷವಾಗಿ ವಿದ್ಯಾರ್ಥಿನಿ ರಮ್ಯಾ ಉಮಚಗಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ್ದು ಸಂತಸ ತಂದಿದೆ. ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದ ಈ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಗ್ರಾಮಸ್ಥರು ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here