ವಿಜಯಸಾಕ್ಷಿ ಸುದ್ದಿ, ಗದಗ: ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕ ಸಹೋದಯ ಸಂಸ್ಥೆಯ ವತಿಯಿಂದ ನ. 25ರಂದು ಹುಬ್ಬಳ್ಳಿಯ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಸದರಿ ಪಂದ್ಯಾವಳಿಯಲ್ಲಿ ಗದಗ ಕೆಎಲ್‌ಇ ಸಂಸ್ಥೆ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದೆ.
ತಂಡದ ಕ್ರೀಡಾಳುಗಳಾದ ಸಾಕ್ಷಿ ಹೊಳಗುಂದಿ, ಚಿನ್ಮಯಿ ಹಿರೇಮಠ, ವಿನುತಾ ಸಂಶಿ, ನೇಹಾ ಪಂಚಮ ಪಾಟೀಲ, ದಿವ್ಯಾ ಹೂಗಾರ, ವಿಧಿ ಜೈನ್, ಸೃಷ್ಟಿ ಮಲಕಶೆಟ್ಟಿ, ಪೂರ್ವಿ ದಿಬ್ಬದಮನಿ, ಅನ್ವಿತಾ ಆಡಪ್ಪನವರ, ಸಹನಾ ದೊಡ್ಡಮನಿ, ಅದಿತಿ ಮೇರವಾಡೆ, ಸಾನ್ವಿ ಚನ್ನಪ್ಪಗೌಡರ ಮತ್ತು ತರಬೇತುದಾರರಾದ ಶಿವನಗೌಡ ಪಾಟೀಲ, ದೈಹಿಕ ಶಿಕ್ಷಕರಾದ ರವೀಂದ್ರ ಗಡಾದ ಮತ್ತು ತಂಡದ ಮ್ಯಾನೇಜರ್ ಹೇಮಾ ಸೊಪ್ಪಿನ ಅವರಿಗೆ ಶಾಲೆಯ ಪ್ರಾಂಶುಪಾಲರಾದ ಕಲ್ಪನಾ ಚಚಡಿ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.



