ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕುರುವಿನಶೆಟ್ಟಿ ಸಮಾಜವು ಶ್ರಮಿಕ, ಕಾಯಕ ಸಮಾಜವಾಗಿದೆ ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಗವಿಮಠದಲ್ಲಿ ಕುರುವಿನಶೆಟ್ಟಿ ಸಮಾಜದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಂಕರ ಶಿವಾಚಾರ್ಯ ಮಾಹಾಸ್ವಾಮಿಗಳ ಪುಣ್ಯರಾಧನೆಯಲ್ಲಿ ಮಕ್ಕಳಿಗೆ ಸನ್ಮಾನಿಸಿ ಮಾತನಾಡಿದರು.
ನೇಕಾರಿಕೆ ಇವರ ಕುಲ ಕಸುಬಾಗಿದ್ದು, ಇವರು ಕಾಯಕ ತತ್ವದಡಿ ಬದುಕಿದವರು. ನಿತ್ಯ ಕಾಯಕ ಯೋಗ ಮಾಡಿ ಸುಂದರ ಬದುಕು ಕಟ್ಟಿಕೊಂಡವರು. ಈಗ ಮಕ್ಕಳಿಗೆ ಉತ್ತಮ ಸಂಸ್ಕಾರ, ಉತ್ತಮ ಶಿಕ್ಷಣ ನೀಡುವುದು ಅಗತ್ಯವಿದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಶಿವಶಂಕರ ಮಾಹಾಸ್ವಾಮೀಜಿ ಮಾತನಾಡಿ, ಆಧುನಿಕ ತಂತ್ರಜ್ಞಾನ ಬೆಳೆದಂತೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ಮಾಹಾರುದ್ರಪ್ಪ ಯಾವಗಲ್ಲ ವಹಿಸಿದ್ದರು. ಹನಮಂತಪ್ಪ ಕೊಂಡಿಕೊಪ್ಪ, ವೀರಭದ್ರಪ್ಪ ಹರ್ತಿ, ಗುರುಪಾದಪ್ಪ ದಂಡಿ, ಸಿದ್ದಪ್ಪ ಡಂಬಳ, ಶ್ರೀಧರ ಚಿನಗುಂಡಿ, ಡಾ. ಎಸ್.ಸಿ. ಚವಡಿ, ರಾಮಣ್ಣಾ ಕಮಾಜಿ, ಸಂಜಯ ನೀಲಗುಂದ, ಕೆ.ಎಲ್. ಕರಿಗೌಡರ, ಶಿವಬಸವ ಹಸಬಿ, ಕೃಷ್ಣಾ ನಾಗಲೋಟಿ, ಅಮರಯ್ಯ ನೀಲಕಂಠಮಠ, ಶಿವಪ್ಪ ಹರ್ತಿ, ಮಾಹಾದೇವಪ್ಪ ಹಳ್ಳಿ ಇದ್ದರು.