ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸ್ಥಳೀಯ ಅಂಜುಮನ್ ಎ ಇಸ್ಲಾಂ ಸರಕಾರಿ ಉರ್ದು ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Advertisement
ಗದಗ ಡಿಜಿಎಂ ಕಾಲೇಜು ಉಪನ್ಯಾಸಕಿ, ವೈದ್ಯೆ ಡಾ. ಮಮತಾ ಕಟಾವ್ಕರ್ ಮಾತನಾಡಿ, ಹೆಣ್ಣು ಮಕ್ಕಳಿಗೆ, ಹದಿಹರೆಯದವರಿಗೆ ಭರವಸೆ ಮತ್ತು ಬೆಂಬಲವನ್ನು ನೀಡುವ ಮೂಲಕ ಪ್ರೌಢಾವಸ್ಥೆಯನ್ನು ನಿಭಾಯಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೌಢಶಾಲೆ ಮುಖ್ಯೋಪಾಧ್ಯಾಯೆ ರಂಜನಾ ತಳಗೇರಿ ವಹಿಸಿದ್ದರು. ಅಂಜುಮನ್ ಅಧ್ಯಕ್ಷ ತಾಜುದ್ದೀನ ಕಿಂಡ್ರಿ, ಎಸ್‌ಡಿಎಂಸಿ ಅಧ್ಯಕ್ಷ ಎ.ಡಿ. ಮುಜಾವರ, ಸದಸ್ಯರಾದ ಇಸ್ಮಾಯಿಲ್ ಖಾಜಿ, ಮಹ್ಮದರಫೀಕ ದಲೀಲ, ಹೈದರ ಖವಾಸ್, ದಾವೂದ ಜಮಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾ-ಕಾಲೇಜು ಬೋಧಕ ವರ್ಗದವರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.