HomeMUNICIPALITY NEWSಎಲ್ಲ ಸಮುದಾಯಕ್ಕೂ ನಿವೇಶನ ನೀಡಿ : ಮಹೇಶ ಕಲಘಟಗಿ

ಎಲ್ಲ ಸಮುದಾಯಕ್ಕೂ ನಿವೇಶನ ನೀಡಿ : ಮಹೇಶ ಕಲಘಟಗಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪುರಸಭೆ ವ್ಯಾಪ್ತಿಯ ಖಾಲಿ ನಿವೇಶನಗಳನ್ನು ಪ್ರತಿಯೊಂದು ಸಮುದಾಯಕ್ಕೂ ನೀಡುವ ಮೂಲಕ ಆಯಾ ಸಮುದಾಯದ ಅಭಿವೃದ್ಧಿಗೆ ಸಹಕರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಅಧ್ಯಕ್ಷ ಮಹೇಶ ಕಲಘಟಗಿ ನೇತೃತ್ವದಲ್ಲಿ ಶುಕ್ರವಾರ ಪುರಸಭೆಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಹೇಶ ಕಲಘಟಗಿ ಮಾತನಾಡಿ, ಪಟ್ಟಣದ ಮಾರುಕಟ್ಟೆ ವ್ಯಾಪ್ತಿಯಲ್ಲಿ ಪ್ರತಿಯೊಂದು ಸಮುದಾಯದ ಅಭಿವೃದ್ಧಿಗಾಗಿ ಖಾಲಿ ನಿವೇಶನವನ್ನು ಒದಗಿಸಬೇಕು. ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಸಮುದಾಯಗಳಿವೆ. ಎಲ್ಲ ಸಮುದಾಯದ ಅಭಿವೃದ್ಧಿಯನ್ನು ಹಾಗೂ ಒಳಿತನ್ನು ಗಮನದಲ್ಲಿಟ್ಟುಕೊಂಡು ಒಂದೊಂದು ಖಾಲಿ ನಿವೇಶನಗಳನ್ನು ಒದಗಿಸಬೇಕು ಹಾಗೂ ನಿವೇಶನಗಳ ಕೊರತೆಯಾದರೆ ಪುರಸಭೆಯ ಮಳಿಗೆಗಳನ್ನು ಸಹ ಒದಗಿಸಿ ಅನೂಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.

ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವೇದಿಕೆಯ ಮಲ್ಲನಗೌಡ ಪಾಟೀಲ್, ಚಂದ್ರು ಪಾಣಿಗಟ್ಟಿ, ಈಶ್ವರಗೌಡ ಪಾಟೀಲ, ಶ್ರೇಯಾಂಕ ಹಿರೇಮಠ, ಪ್ರವೀಣ ದಶಮನಿ, ಅಮರೀಶ ಗಾಂಜಿ, ಮುರಳೀಧರ ಮಲ್ಲಸಮುದ್ರ, ಮಲ್ಲೇಶ ಡಂಬಳ, ಜಕಣಾಚಾರಿ, ಮೇದೂರ, ಶಶಿ ಗೋಸಾವಿ, ನಿಖಿಲ್ ಗೋಸಾವಿ, ಸಂಜೀವ ಗೋಸಾವಿ, ಆಕಾಶ ಗೋಸಾವಿ, ಕಿರಣ ಗೋಸಾವಿ, ತೇಜು ಉದ್ದನಗೌಡ್ರ, ಬಸನಗೌಡ ಮನ್ನಂಗಿ ಸೇರಿದಂತೆ ಅನೇಕರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!