ವಿಜಯಸಾಕ್ಷಿ ಸುದ್ದಿ, ಗದಗ : ಮಾಜಿ ಸಚಿವ ಹಾಗೂ ಬಂಡಾಯ ನಾಡಿನ ಪ್ರಭಾವಿ ನಾಯಕರಾದ ಬಿ.ಆರ್. ಯಾವಗಲ್ ಅವರಿಗೆ ವಿಧಾನ ಪರಿಷತ್ ಸ್ಥಾನವನ್ನು ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಸಂಯೋಜಕ ರಾಜು ಪೆಂಡಾರ್ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ಬಿ.ಆರ್. ಯಾವಗಲ್ ಅವರು ಒಬ್ಬ ಜಾತ್ಯತೀತ ಹಾಗೂ ದಕ್ಷ ಆಡಳಿತಗಾರಗಿದ್ದು, ತಮ್ಮ ಅಧಿಕಾರದ ಅವಧಿಯಲ್ಲಿ ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಸಚಿವರಿದ್ದಾಗ ರಾಜ್ಯದ ಹಾಗೂ ಗದಗ ಜಿಲ್ಲೆಯ ಜನತೆಗೆ ಉತ್ತಮ ಯೋಜನೆಗಳ ಮೂಲಕ ಸಾಕಷ್ಟು ಕೊಡಗೆಗಳನ್ನು ನೀಡಿದ್ದಾರೆ.
ಉತ್ತರ ಕರ್ನಾಟಕದ ಹಾಗೂ ಬಂಡಾಯ ನಾಡಿನ ಅನುಭವಿ ನಾಯಕರಾದ ಬಿ.ಆರ್. ಯಾವಗಲ್ ಅವರಿಗೆ ವಿಧಾನ ಪರಿಷತ್ ಸ್ಥಾನವನ್ನು ನೀಡಬೇಕೆಂದು ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹಾಗೂ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.