HomeGadag Newsಬಸವತತ್ವ ವೈದಿಕಗೊಳಿಸುವ ಹುನ್ನಾರಕ್ಕೆ ಜಾಗತಿಕ ಲಿಂಗಾಯತ ಮಹಾಸಭೆ ಖಂಡನೆ

ಬಸವತತ್ವ ವೈದಿಕಗೊಳಿಸುವ ಹುನ್ನಾರಕ್ಕೆ ಜಾಗತಿಕ ಲಿಂಗಾಯತ ಮಹಾಸಭೆ ಖಂಡನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಲಿಂಗಾಯತ ಧರ್ಮವನ್ನು ವೈದಿಕಗೊಳಿಸುವ ಹುನ್ನಾರಕ್ಕೆ ಶತಮಾನಗಳ ಇತಿಹಾಸವಿದ್ದು, ಅದರ ಮುಂದುವರೆದ ಭಾಗವಾಗಿ ಇತ್ತೀಚೆಗೆ ಸದಾಶಿವಾನಂದ ಮಹಾಸ್ವಾಮಿಗಳು ಸಂಪಾದನೆ ಮಾಡಿರುವ `ವಚನ ದರ್ಶನ’ ಕೃತಿಯಲ್ಲಿ ಲಿಂಗಾಯತದ ಮೂಲ ಆಶಯವನ್ನೇ ಬುಡಮೇಲು ಮಾಡುವ ಆಕ್ಷೇಪಾರ್ಹ ಲೇಖನಗಳಿವೆ, ಜಾಗತಿಕ ಲಿಂಗಾಯತ ಮಹಾಸಭೆ ಇದನ್ನು ಬಲವಾಗಿ ಖಂಡಿಸುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಮಹಾಪ್ರಧಾನ ಕಾರ್ಯದರ್ಶಿಗಳಾದ ಡಾ.ಎಸ್.ಎಂ ಜಾಮದಾರ ನುಡಿದರು.

ಅವರು ದಿ.22 ರಂದು ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
`ವಚನ ದರ್ಶನ’ ಕೃತಿಯನ್ನು ರಾಜ್ಯದ ನಾನಾ ಭಾಗಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಆ ಸಮಾರಂಭಗಳಲ್ಲಿ ಬಸವತತ್ವದ ಕುರಿತು ಆರ್.ಎಸ್.ಎಸ್ ಶಾಖೆಯ ಪ್ರಚಾರಕರೆಲ್ಲ ಮನಬಂದಂತೆ ಮಾತನಾಡುತ್ತಿದ್ದಾರೆ, ವಚನಗಳು ರಚಿತವಾಗಿಲ್ಲ ಬದಲಾಗಿ ಅವೇ ಸೃಜಿತವಾಗಿವೆ ಎಂದೂ, ವಚನ ಚಳುವಳಿಯೇ ನಡೆದಿಲ್ಲ ಎಂದೂ ಐತಿಹಾಸಿಕ ಸತ್ಯವನ್ನು ಮರೆಮಾಚುತ್ತಿದ್ದಾರೆ, ವಚನ ಚಳುವಳಿಯೇ ನಡೆದಿಲ್ಲವೆಂದಾದರೆ ಸಾವಿರಾರು ಶರಣರ ಕಗ್ಗೊಲೆ ಯಾಕಾಯಿತು ಎಂದು ಪ್ರಶ್ನಿಸಿದರು.

ನಿರಾಕಾರ ದೇವರನ್ನು ಪೂಜಿಸುವರೆಲ್ಲ ಹಿಂದೂಗಳು ಎಂದು ಸದಾಶಿವಾನಂದ ಸ್ವಾಮೀಜಿ ಸೇರಿದಂತೆ ಹಲವರು ಹೇಳುತ್ತಿದ್ದಾರೆ ಹಾಗಾದರೆ ಕ್ರೈಸ್ತ, ಮುಸ್ಲಿಂ ಎಲ್ಲರೂ ಹಿಂದೂಗಳೇ ಎಂದು ಪ್ರಶ್ನಿಸಿದರು.

ಇದುವರೆಗೂ 23,000 ವಚನಗಳು ಲಭ್ಯವಾಗಿವೆ, ಕೆಲವು ವಚನಗಳಲ್ಲಿ ಸಂಸ್ಕೃತದ ಉಲ್ಲೇಖ ಇದೆ ಹಾಗಿದ್ದ ಮಾತ್ರಕ್ಕೆ ಎಲ್ಲಾ ವಚನಗಳ ವೇದ ಆಗಮಗಳ ರೂಪವೇ ಆಗಿದೆ ಎನ್ನುವ ಇವರಿಗೆ ಅಧ್ಯಯನದ ಕೊರತೆ ಇದೆ ಎಂದರು.

ವಚನ ದರ್ಶನ ಕೃತಿಯಲ್ಲಿ ಬಸವೇಶ್ವರ ಭಾವಚಿತ್ರವೂ ವಿಕೃತಗೊಂಡಿದ್ದು, ಈ ಕೃತಿಯನ್ನು ವಿರೋಧಿಸುವ ಪ್ರಜ್ಞಾವಂತರ ಮೇಲೆ ಬಲಪ್ರಯೋಗವನ್ನೂ ಮಾಡುವ ಕಾರ್ಯವನ್ನು ಆ ಸ್ವಾಮೀಜಿಗಳೂ ಸೇರಿ ಆರ್.ಎಸ್.ಎಸ್ ನವರು ಮಾಡುತ್ತಿದ್ದಾರೆ. ಇಂಥ ಕೃತ್ಯವನ್ನು ಜಾಗತಿಕ ಲಿಂಗಾಯತ ಮಹಾಸಭೆ ತೀವ್ರವಾಗಿ ಖಂಡಿಸುತ್ತದೆ ಎಂದರು.

ನಿವೃತ್ತ ನ್ಯಾಯಾಧೀಶರಾದ ಕೆಂಪಣ್ಣಗೌಡರ ಮಾತನಾಡಿ, ಸಂವಿಧಾನದ ಅನ್ವಯ ಯಾವುದೇ ಧರ್ಮವನ್ನು ಪಾಲಿಸಲು ಅವಕಾಶ ಇದ್ದು, ಬಸವತತ್ವದವರಾದ ನಮಗೆ ನೀವು ಹಿಂದೂಗಳೇ ಎಂದು ಆದೇಶ ಹೊರಡಿಸುವ ಅಧಿಕಾರ ಯಾರಿಗೂ ಇಲ್ಲ. ಹಿಂದೂ ಎನ್ನುವುದು ರಾಷ್ಟ್ರದ ಸಂಕೇತವಾಗಿದ್ದು, ಯಾವತ್ತೂ ಅದು ಧಾರ್ಮಿಕ ಸಂಕೇತ ಅಲ್ಲವೇ ಅಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಸವರಾಜ್ ಧನ್ನೂರ, ಬಸವರಾಜ ರೊಟ್ಟಿ, ಜಿ.ಬಿ ಪಾಟೀಲ, ಪ್ರಭುಲಿಂಗ ಮಾಧವರ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಎಸ್ ಚಟ್ಟಿ, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಗುಂಡುಶೆಟ್ಟಿ, ಬಸವರಾಜ ಬುಳ್ಳಾ, ಪ್ರಕಾಶ ಅಸುಂಡಿ, ಶ್ರೀದೇವಿ, ಸವಿತಾ ನಡಕಟ್ಟಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಾಗತಿಕ ಲಿಂಗಾಯತ ಮಹಾಸಭೆಯ ವಾರ್ಷಿಕ ಮಹಾಸಭೆಯ ನಿರ್ಣಯಗಳು

ಜಾಗತಿಕ ಲಿಂಗಾಯತ ಮಹಾಸಭಾದ 5ನೇ ವಾರ್ಷಿಕ ಸಭೆಯಲ್ಲಿ ಕೈಕೊಂಡ ನಿರ್ಣಯಗಳ ಕುರಿತು ಡಾ.ಎಸ್.ಎಂ ಜಾಮದಾರ ವಿವರಿಸಿದರು. ಸದ್ಯದಲ್ಲೇ ರಾಜ್ಯಾದ್ಯಂತ ಹೊಸ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆರಿಸುವ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಸಾಂವಿಧಾನಿಕ ಮಾನ್ಯತೆ ಕುರಿತು ವಿಚಾರ ಸಂಕೀರ್ಣ ಏರ್ಪಡಿಸುವ ಹಾಗೂ `ವಚನ ದರ್ಶನ’ ಕೃತಿಯ ವಿರುದ್ಧ ಹೋರಾಟದ ರೂಪುರೇಷೆ ಹಾಕಿಕೊಳ್ಳಲಾಯಿತು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!