ಗೋವಾದ ಮದ್ಯ ಬೆಂಗಳೂರಿನಲ್ಲಿ ಪತ್ತೆ: 5 ಲಕ್ಷ ಮೌಲ್ಯದ 144 ಬಾಟಲಿ ಸೀಜ್, ಓರ್ವ ಅರೆಸ್ಟ್!

0
Spread the love

ಬೆಂಗಳೂರು:- ಗೋವಾದ ಮದ್ಯ ಬೆಂಗಳೂರಿನಲ್ಲಿ ಪತ್ತೆ ಆಗಿದ್ದು, 5 ಲಕ್ಷ ಮೌಲ್ಯದ 144 ಬಾಟಲಿಯನ್ನು ಸೀಜ್ ಮಾಡಿ ಓರ್ವನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

Advertisement

ಪುರುಷೋತ್ತಮ್ ಬಂಧಿತ ಆರೋಪಿ ಆಗಿದ್ದು, ಈತ ಕತ್ರಿಗುಪ್ಪೆ ನಿವಾಸಿ ಎನ್ನಲಾಗಿದೆ. ಆರೋಪಿ ಪುರುಷೋತ್ತಮ್ ಗೋವಾದಿಂದ ಕಡಿಮೆ ಬೆಲೆಗೆ ಮದ್ಯ ತರಿಸಿಕೊಳ್ಳುತ್ತಿದ್ದ. ಗೋವಾದಲ್ಲಿರುವ ಅಂಗಡಿಯವರ ಸಂಪರ್ಕದ ಮೇರೆಗೆ ಬೆಂಗಳೂರಿಗೆ ಮದ್ಯ ತರಿಸಿಕೊಳ್ಳುತ್ತಿದ್ದ.

ತನಗೆ ಬೇಕಾದಾಗಲೆಲ್ಲಾ ತಿಳಿಸಿ ಬಸ್‌ನಲ್ಲಿ ಮದ್ಯದ ಬಾಟಲ್ ಇಡುವಂತೆ ಹೇಳುತ್ತಿದ್ದ. ಬಳಿಕ ಇಲ್ಲಿಗೆ ಬರುತ್ತಿದ್ದಂತೆ ಇಳಿಸಿಕೊಳ್ಳುತ್ತಿದ್ದ. ನಂತರ ಮನೆಗೆ ತೆಗೆದುಕೊಂಡು ಹೋಗಿ ಸ್ಟಾಕ್ ಮಾಡುತ್ತಿದ್ದ. ಇದನ್ನು ಕಡಿಮೆ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ.

ಅ.27 ರಂದು ಪುರುಷೋತ್ತಮ್ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಬನಶಂಕರಿ ಎರಡನೇ ಹಂತದಲ್ಲಿ ನಿಂತಿದ್ದ. ಆತನ ಚಲನವಲನ ಅಬಕಾರಿ ಅಧಿಕಾರಿಗಳಿಗೆ ಅನುಮಾನ ಹುಟ್ಟಿಸಿತ್ತು.

ಈ ವೇಳೆ ಬ್ಯಾಗ್ ತೆಗೆದು ಪರಿಶೀಲಿಸಿದಾಗ ಮದ್ಯದ ಬಾಟಲ್ ಪತ್ತೆಯಾಗಿದೆ. ಬಾಟಲ್ ಮೇಲೆ ಫಾರ್ ಸೇಲ್ ಇನ್ ಗೋವಾ ಓನ್ಲಿ ಎಂದು ನಮೂದಾಗಿದ್ದು ಕಂಡು ಅವುಗಳು ಗೋವಾದಲ್ಲಿ ತಯಾರಿಸಲಾಗಿದ್ದ ಮದ್ಯದ ಬಾಟಲ್ ಎಂದು ತಿಳಿದಿದೆ.

ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಗೋವಾ ರಾಜ್ಯದ ಮದ್ಯದ ಅಂಗಡಿ ಜೊತೆಗಿನ ನಂಟು ಬಯಲಾಗಿದೆ. ಜೊತೆಗೆ ಮದ್ಯ ತರಿಸಿದ್ದ ಬಿಲ್ಲುಗಳು ಕೂಡ ಪತ್ತೆಯಾಗಿದೆ. ನಂತರ ಕತ್ರಿಗುಪ್ಪೆ ಮನೆಗೆ ಕರೆದೊಯ್ದು ಶೋಧಿಸಿದಾಗ ಅಕ್ರಮ ಮದ್ಯದ ಬಾಟಲ್‌ಗಳು ಇರುವುದು ತಿಳಿದುಬಂದಿದೆ. ಕೂಡಲೇ ಆತನನ್ನು ಅಬಕಾರಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here