ಕಾಂತಾರ ನೋಡಿ ಹುಚ್ಚಾಟ ಮಾಡಿದವರಿಗೆ ಹುಚ್ಚು ಹಿಡಿಸುತ್ತೇನೆ ಎಂದ ದೈವ

0
Spread the love

ರಿಷಬ್‌ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಾಕ್ಸ್‌ ಆಫೀಸ್‌ ನಲ್ಲಿ ಕೋಟಿ ಕೋಟಿ ಕಲೆಕ್ಷನ್‌ ಮಾಡುತ್ತಿದೆ. ಆದ್ರೆ ಸಿನಿಮಾ ನೋಡಿದ ಕೆಲವರು ದೈವದ ಹೆಸರಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಹಾಗೆ ‘ಹುಚ್ಚು ಕಟ್ಟಿದವರಿಗೆ ಹುಚ್ಚು ಹಿಡಿಸುತ್ತೇನೆ ಎಂದು ಪಲ್ಚಂಡಿ ದೈವ ಎಚ್ಚರಿಕೆ ನೀಡಿದೆ.

Advertisement

ಕಾಂತಾರ ಸಿನಿಮಾ ಬಿಡುಗಡೆ ಆದ ಬಳಿಕ ಮನೊರಂಜನೆಗಾಗಿ, ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್​ ಪಡೆಯಲು ದೈವದ ಅನುಕರಣೆ ಮಾಡುತ್ತಾ ದೈವಕ್ಕೆ ಅವಮಾನ ಮಾಡುತ್ತಿದ್ದಾರೆ. ಕಾಂತಾರ ಅಧ್ಯಾಯ ಒಂದು ಸಿನಿಮಾ ನೋಡಲು ಪ್ರೇಕ್ಷಕರೊಬ್ಬರು ತಮಿಳು ನಾಡಿ ಚಿತ್ರಮಂದಿರದಲ್ಲಿ ಪಂಜುರ್ಲಿ ದೈವದ ವೇಷ ಧರಿಸಿ ಬಂದಿದ್ದರು. ಪಂಜುರ್ಲಿ ದೈವದ ಹಾಗೆ ಚಿತ್ರಮಂದಿರದ ತುಂಬೆಲ್ಲಾ ಕುಣಿದಿದ್ದಾನೆ. ಅಷ್ಟೆ ಅಲ್ಲ ಬೆಂಗಳೂರಿನಲ್ಲಿ ಚಿತ್ರಮಂದಿರದ ಹೊರಗೆ ಗುಳಿಗ ದೈವ ಮೈ ಮೇಲೆ ಬಂದಂತೆ ವ್ಯಕ್ತಿಯೊಬ್ಬ ಪ್ರಚಾರಕ್ಕಾಗಿ ನರ್ತಿಸಿದ್ದಾನೆ.

ಇದರ ಜೊತೆ ಸಿನಿಮಾ ನೋಡುತ್ತಲೇ ಮಹಿಳೆಯ ಮೇಲೆ ದೈವ ಆಹ್ವಾನ ಆದಂತೆ ವರ್ತಿಸುತ್ತಿರೋ ಘಟನೆಗಳು ನಡೆದಿದೆ. ಇದನ್ನೆಲ್ಲಾ ಗಮನಿಸಿರೋ ದೈವ ನರ್ತಕರು. ಬೇಸರಗೊಂಡಿದ್ದು, ದೈವದ ಅಪಹಾಸ್ಯ, ಅನುಕರಣೆ ಮಾಡುವವರ ವಿರುದ್ಧ ಬಜಪೆ, ಪೆರಾರ, ಬ್ರಹ್ಮ ಬಲವಂಡಿ, ಪಿಲ್ಚಂಡಿ ದೈವಸ್ಥಾನಗಳಲ್ಲಿ ದೈವ ನರ್ತಕರು, ದೈವಾರಾಧಕರು ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. ದೈವ ನರ್ತಕರು ಮತ್ತು ದೈವಾರಾಧಕರಿಗೆ ಪಿಲ್ಚಂಡಿ ದೈವ ನುಡಿ ಕೊಟ್ಟಿದೆ. ಸಿನಿಮಾ ನೋಡಿ ದೈವಕ್ಕೆ ಅಪಹಾಸ್ಯ ಆಗೋ ಹಾಗೆ ನಟಿಸೋರಿಗೆ ಎಚ್ಚರಿಕೆ ಕೊಟ್ಟಿದೆ.

‘ಹುಚ್ಚು ಕಟ್ಟಿದವರಿಗೆ ಹುಚ್ಚು ಹಿಡಿಸುತ್ತೇನೆ ‘ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನ ಆಸ್ಪತ್ರೆಗೆ ಸುರಿಸುತ್ತೇನೆ” ನಿಮ್ಮ ಹಿಂದೆ ನಾನಿದ್ದೇನೆ ಹೋರಾಟ ಮುಂದುವರೆಸಿ ಎಂದು ದೈವದ ಎದುರು ನೋವು ತೋಡಿಕೊಂಡ ದೈವಾರಾಧಕರಿಗೆ ಪಿಲ್ಚಂಡಿ ದೈವದ ಅಭಯ ನುಡಿ ಕೊಟ್ಟಿದೆ.


Spread the love

LEAVE A REPLY

Please enter your comment!
Please enter your name here