ವಿಜಯಸಾಕ್ಷಿ ಸುದ್ದಿ, ಮುಳಗುಂದ: ದೇವಿ ಪುರಾಣವು ಶಕ್ತಿ, ಭಕ್ತಿಯ ಸಂಕೇತವಾಗಿದೆ ಎಂದು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗದೇವರು ಹೇಳಿದರು.
ಅವರು ಪಟ್ಟಣದ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದೇವಿ ಪುರಾಣ ಮಂಗಲೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ವಿಜಯದಶಮಿ ವಿಜಯದ ಪ್ರತಿರೂಪವಾಗಿದ್ದು, ಇಲ್ಲಿ ಅಗಾಧವಾದ ಒಂದು ಶಕ್ತಿ ರಹಿತವಾಗಿದೆ. ಆ ಶಕ್ತಿಯನ್ನು ನಿಜ ಭಕ್ತಿಯಿಂದ ಮಾತ್ರ ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟೆವು ಅನ್ನುವುದು ಮುಖ್ಯವಾಗಿದ್ದು, ಮಕ್ಕಳ ಭವಿಷ್ಯ, ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರಕಾಶ ಮದ್ದಿನ ಸತತ 14 ವರ್ಷದಿಂದ ಉಚಿತ ಯೋಗ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಗದಗ ಅಡವೀಂದ್ರಸ್ವಾಮಿಮಠದ ಮಹೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜ ಸೇವೆ ಮಾಡುವುದು ಒಂದು ತಪಸ್ಸು. ಪ್ರಕಾಶ ಮದ್ದಿನ ಕುಟುಂಬ ಪ್ರತಿ ವರ್ಷವೂ ದೇವಿ ಪುರಾಣ ಆಚರಣೆ ಮಾಡುವ ಮೂಲಕ ಜನರಲ್ಲಿ ಧರ್ಮ, ಸಂಸ್ಕೃತಿ, ಸಂಸ್ಕಾರ ಬಿತ್ತಿರುವುದು ಶ್ಲಾಘನೀಯವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಯಲ್ಲಿ ಉತ್ತಮ ಸಂಸ್ಕಾರ ನೀಡುವುದು ಪ್ರತೀ ಜೀವನ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಎಂ.ಡಿ. ಬಟ್ಟೂರು ವಹಿಸಿದ್ದರು. ಅಶೋಕ ಸೋನಗೋಜಿ, ಪುನಿತ ಓಲೇಕಾರ, ಸಿಪಿಐ ಸಂಗಮೇಶ ಶಿವಯೋಗಿ, ಡಾ. ಎಸ್.ಸಿ. ಚವಡಿ, ಪಿ. ಎ. ವಂಟಕರ, ಮಂಜುನಾಥ ಮಟ್ಟಿ, ಚನ್ನಪ್ಪ ಅಂಗಡಿ, ಗೀತಾ ಜಾಧವ, ಪ್ರಕಾಶ ಮದ್ದಿನ, ಮೋಹನ ಮದ್ದಿನ, ಶಿದ್ದಣ್ಣಾ ಜವಳಿ ಇದ್ದರು.