ಬೆಂಗಳೂರು: ಫಳ ಫಳ ಹೊಳೆಯುವ ಚಿನ್ನ.. ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ. ಈ ಹಳದಿ ಬಣ್ಣದ ಲೋಹವೆಂದರೆ ಮಹಿಳೆಯರಿಗೆ ಅಚ್ಚು ಮೆಚ್ಚು. ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಇದ್ದೆ ಇರುತ್ತದೆ. ಪ್ರಾಚೀನ ಕಾಲದಿಂದಲೂ ಚಿನ್ನಕ್ಕೆ ಸಾಕಷ್ಟು ಮಹತ್ವವಿದ್ದು ಭಾರತದಲ್ಲಂತೂ ಚಿನ್ನಕ್ಕೆ ಅಪಾರವಾದ ಬೇಡಿಕೆಯಿದೆ. ಯಾವುದೇ ಶುಭ ಸಮಾರಂಭಗಳಿದ್ದಾಗ ಜನರು ಚಿನ್ನ ಖರೀದಿಯನ್ನು ಸಾಮಾನ್ಯವಾಗಿ ಮಾಡುತ್ತಾರೆ.
ಹಾಗಾಗಿ ಚಿನ್ನ ಪ್ರತಿ ರಾಷ್ಟ್ರಗಳಿಂದಲೂ ಸ್ವೀಕರಿಸಲ್ಪಡುತ್ತವೆ ಹಾಗೂ ಜಗತ್ತಿನಾದ್ಯಂತ ಮಾನ್ಯತೆ ಹೊಂದಿದೆ. ಅಲ್ಲದೆ ಹಲವು ದಶಕಗಳಿಂದ ಚಿನ್ನದ ದರವು ಸ್ಥಿರವಾಗಿ ಏರುತ್ತಲೇ ಇರುವುದರಿಂದ ಇಂದು ಉತ್ತಮ ಹೂಡಿಕೆಯ ವಸ್ತುವಾಗಿಯೂ ಚಿನ್ನ ಗಮನ ಸೆಳೆದಿದೆ.
ಇಂದು ಗುರುವಾರ ಚಿನ್ನದ ಬೆಲೆ ಗ್ರಾಮ್ಗೆ 200 ರೂ ತಗ್ಗಿದರೆ, ಬೆಳ್ಳಿ ಬೆಲೆ 2 ರೂ ಕಡಿಮೆ ಆಗಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,775 ರೂಗೆ ಇಳಿದಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 9,573 ರೂ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆ 7,180 ರೂಗೆ ಇಳಿದಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಗ್ರಾಮ್ಗೆ 100.40 ರೂ ಇದ್ದದ್ದು 98 ರೂಗೆ ಇಳಿದಿದೆ. ಚೆನ್ನೈನಲ್ಲಿ ಬೆಲೆ 107 ರೂ ಆಗಿದೆ.
ವಿದೇಶಗಳಲ್ಲಿ ಕೆಲವೆಡೆ ಸ್ವರ್ಣ ಬೆಲೆ ಇಳಿಕೆಯಾಗಿದೆ. ಇನ್ನು, ಚಿನ್ನದಂತೆ ಬೆಳ್ಳಿ ಬೆಲೆಯೂ ಭರ್ಜರಿ ಇಳಿಕೆ ಕಂಡಿದೆ. ಗ್ರಾಮ್ಗೆ 2 ರೂನಷ್ಟು ಇಳಿಮುಖವಾಗಿದೆ ಬೆಳ್ಳಿ ಬೆಲೆ. ಬೆಂಗಳೂರು, ಮುಂಬೈ ಮೊದಲಾದ ಕಡೆ ಈಗ ಬೆಳ್ಳಿ ಬೆಲೆ 98 ರೂ ಇದೆ. ತಮಿಳುನಾಡು, ಕೇರಳ ಮೊದಲಾದ ಕಡೆ ಬೆಲೆ 107 ರೂಗೆ ಇಳಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 87,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 95,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 87,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,800 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 1ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,750 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,730 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,800 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 87,750 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 95,730 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 980 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 87,750 ರೂ
- ಚೆನ್ನೈ: 87,750 ರೂ
- ಮುಂಬೈ: 87,750 ರೂ
- ದೆಹಲಿ: 87,900 ರೂ
- ಕೋಲ್ಕತಾ: 87,750 ರೂ
- ಕೇರಳ: 87,750 ರೂ
- ಅಹ್ಮದಾಬಾದ್: 87,800 ರೂ
- ಜೈಪುರ್: 87,900 ರೂ
- ಲಕ್ನೋ: 87,900 ರೂ
- ಭುವನೇಶ್ವರ್: 87,750 ರೂ



