ಬೆಂಗಳೂರು: ಬುಧವಾರ ಚಿನ್ನ–ಬೆಳ್ಳಿ ದರಗಳಲ್ಲಿ ಭಾರೀ ಏರಿಕೆ ಕಂಡು ಜನರಲ್ಲಿ ಆತಂಕ ಮೂಡಿಸಿದ್ದ ಬೆನ್ನಲ್ಲೇ, ಗುರುವಾರ ದರಗಳಲ್ಲಿ ದೊಡ್ಡ ಮಟ್ಟದ ಇಳಿಕೆ ದಾಖಲಾಗಿದೆ. ಚಿನ್ನದ ಬೆಲೆ ಒಂದೇ ದಿನದಲ್ಲಿ 10 ಗ್ರಾಂಗೆ 5,020 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯೂ ಕುಸಿತ ಕಂಡಿದೆ.
ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 502 ರೂಪಾಯಿ ಇಳಿಕೆಯಾಗಿದ್ದು, ಇದೀಗ 1 ಗ್ರಾಂ ಚಿನ್ನದ ಬೆಲೆ 15,442 ರೂಪಾಯಿಗೆ ತಲುಪಿದೆ. ಇದರಿಂದ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,54,420 ರೂಪಾಯಿಯಾಗಿದೆ.
ಅದೇ ರೀತಿ, 22 ಕ್ಯಾರೆಟ್ ಚಿನ್ನದ ಬೆಲೆಯೂ ಇಳಿಕೆ ಕಂಡಿದ್ದು, ಪ್ರತಿ ಗ್ರಾಂಗೆ 460 ರೂಪಾಯಿ ಹಾಗೂ 10 ಗ್ರಾಂಗೆ 4,600 ರೂಪಾಯಿ ಕಡಿಮೆಯಾಗಿದೆ. ಪರಿಣಾಮವಾಗಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,41,550 ರೂಪಾಯಿಗೆ ಇಳಿದಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ 1 ಗ್ರಾಂಗೆ 15,442 ರೂಪಾಯಿ ಇದ್ದು, 10 ಗ್ರಾಂಗೆ 1,54,420 ರೂಪಾಯಿ ಇದೆ. ಈ ದರದಲ್ಲಿ ಜಿಎಸ್ಟಿ ಸೇರಿಲ್ಲ. ಹೀಗಾಗಿ ಆಭರಣ ಮಳಿಗೆಗಳಲ್ಲಿನ ಬೆಲೆಯಲ್ಲಿ ವ್ಯತ್ಯಾಸ ಇರಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಇನ್ನು ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಂಗೆ 20 ರೂಪಾಯಿ ಇಳಿಕೆಯಾಗಿ 300 ರೂಪಾಯಿಯಾಗಿದೆ. ಇದರೊಂದಿಗೆ 1 ಕೆಜಿ ಬೆಳ್ಳಿ ಬೆಲೆ 3,00,000 ರೂಪಾಯಿಗೆ ಇಳಿದಿದೆ.



