ಬೆಂಗಳೂರು: ಯಾವುದೇ ಶುಭ ಸಮಾರಂಭವಿರಲಿ ಅಲ್ಲಿ ಚಿನ್ನ ಬೆಳ್ಳಿ ಇರಲೇಬೇಕು. ಹುಟ್ಟಿದ ಪುಟ್ಟ ಕಂದಮ್ಮನಿಗೂ ದೃಷ್ಟಿಯಾಗದಿರಲಿ ಎಂದು ಚಿನ್ನದ ತಾಯತವನ್ನೇ ಕಟ್ಟುತ್ತಾರೆ ಇನ್ನು ಚಿನ್ನದ ಬಳೆ, ಓಲೆ, ಉಡಿದಾರ ಬೆಳ್ಳಿಯ ಕಾಲ್ಗೆಜ್ಜೆ ಎಂದು ಅಲಂಕರಿಸುತ್ತಾರೆ. ವಿವಾಹ ಸಮಾರಂಭಗಳಲ್ಲೂ ವಧು ವರರನ್ನು ಅಲಂಕರಿಸಲು ಚಿನ್ನದ ಬೆಳ್ಳಿಯ ಆಭರಣಗಳನ್ನು ಬಳಸಲಾಗುತ್ತದೆ.
ಬೆಲೆ ಕಡಿಮೆಯಾದ ಕೂಡಲೇ ಚಿನ್ನ ಖರೀದಿಗೆ ಗ್ರಾಹಕರು ತಾ ಮುಂದು ನಾ ಮುಂದು ಹೊರಡುತ್ತಾರೆ. ಬೆಲೆ ಕಡಿಮೆಯಾದಷ್ಟು ಚಿನ್ನವನ್ನು ಕೂಡ್ಟಿಟ್ಟುಕೊಳ್ಳೋಣ ಎಂಬುದು ಅವರ ಲೆಕ್ಕಾಚಾರವಾಗಿದೆ. ಒಟ್ಟಿನಲ್ಲಿ ಆಡಂಬರಕ್ಕೂ, ಹೂಡಿಕೆಯ ರೂಪದಲ್ಲೂ ಚಿನ್ನ ಇಂದು ಬಳಕೆಯಾಗುತ್ತಿದೆ.
ಇಂದು ಶುಕ್ರವಾರವೂ ಭರ್ಜರಿ ಏರಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್ಗೆ 120 ರೂನಷ್ಟು ಹೆಚ್ಚಳವಾಗಿದೆ. ಅಪರಂಜಿ ಚಿನ್ನದ ಬೆಲೆ 133 ರುನಷ್ಟು ಏರಿಕೆ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ ಕೂಡ ಹತ್ತಿರಹತ್ತಿರ ನೂರು ರೂ ನಷ್ಟು ದುಬಾರಿಯಾಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 8,400 ರೂ ಗಡಿ ದಾಟಿದೆ.
22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,700 ರೂ ಗಡಿ ಮೀರಿ ಹೋಗಿದೆ. ವಿದೇಶಗಳ ಪೈಕಿ ಅರಬ್ ನಾಡಿನಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ. ಅಮೆರಿಕದಲ್ಲಿ ಸದ್ಯ ಅತ್ಯಂತ ಕಡಿಮೆ ಬೆಲೆ ಇದೆ. ಇದೇ ವೇಳೆ, ಬೆಳ್ಳಿ ಬೆಲೆಯೂ ಇಂದು ಭರ್ಜರಿ ಏರಿಕೆ ಆಗಿದೆ.
ನಿನ್ನೆ, ಮೊನ್ನೆಯಂತೆ ಇಂದೂ ಕೂಡ ಬೆಳ್ಳಿ ಬೆಲೆ ಒಂದು ರೂನಷ್ಟು ಹೆಚ್ಚಳವಾಗಿದೆ. ಮೂರು ದಿನದಲ್ಲಿ ಅದರ ಬೆಲೆ ಮೂರು ರೂನಷ್ಟು ಭಾರೀ ಇಳಿಕೆ ಆಗಿರುವುದು ಗಮನಾರ್ಹ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 77,300 ರುಪಾಯಿ ಇದೆ.
24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 84,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,950 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 77,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,950 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 31ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 84,330 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 63,250 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 84,330 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 995 ರೂ