ಮದುವೆಗೆಂದು ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ: ದೂರು ಕೊಟ್ರೂ ಕ್ರಮವಿಲ್ಲ – ಮಹಿಳೆ ಕಣ್ಣೀರು!

0
Spread the love

ಚೆನ್ನೈ:- ಮಹಿಳೆ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಆಗಿದ್ದು, ದೂರು ಕೊಟ್ರೂ ಕ್ರಮ ಕೈಗೊಳ್ಳದ ಹಿನ್ನೆಲೆ ಮಹಿಳೆ ಕಣ್ಣೀರು ಹಾಕಿದ್ದಾರೆ.

Advertisement

ಹೌದು, ತಮಿಳುನಾಡಿನ ವೇಲೂರು ಜಿಲ್ಲೆಯ ನಾರಾಯಣಪುರಂ ಗ್ರಾಮದ ಕಲಾವತಿ ಎಂಬುವವರು ಮನೆಯಲ್ಲಿ 15 ಸವರನ್ ಚಿನ್ನಾಭರಣ, 50,000 ರೂಪಾಯಿ ನಗದು, ರೇಷ್ಮೆ ಸೀರೆ ಇಟ್ಟಿದ್ದರು. ಇದು ಜೂನ್ 24ರಂದು ಕಳುವಾಗಿದೆ. ಕುಟುಂಬಸ್ಥರು ಕೃಷಿ ಕೆಲಸಕ್ಕೆ ಹೋಗಿದ್ದನ್ನೇ ಹೊಂಚುಹಾಕಿ ಕಾದಿದ್ದ ಕಳ್ಳರು ಮನೆ ಬಾಗಿಲು ಒಡೆದು ಲೂಟಿ ಮಾಡಿದ್ದಾರೆ. ಸ್ಥಳೀಯ ಪೊಲಿಸರಿಗೆ ದೂರು ಕೊಟ್ಟರೆ ಇನ್ನೂ ಕ್ರಮ ಇಲ್ಲ ಅಂತ ಕಲಾವತಿ ಕಣ್ಣೀರು ಹಾಕಿದ್ದು ವೈರಲ್ ಆಗಿದೆ.

ಮದುವೆಗೆಂದು ಮನೆಯಲ್ಲಿ ಇಟ್ಟಿದ್ದ ಆಭರಣಗಳು ಕಳ್ಳತನವಾಗಿದೆ ಹುಡುಕಿಕೊಡಿ ಅಂತ ಮಹಿಳೆ ಕಣ್ಣೀರಿಟ್ಟಿದ್ದಾರೆ. ಇದನ್ನು ಬಿಜೆಪಿ ನಾಯಕ ಅಣ್ಣಾಮಲೈ ಗಮನಿಸಿ ರಾಜ್ಯ ಸರ್ಕಾರದ ವಿರುದ್ಧ ಎಕ್ಸ್‌ನಲ್ಲಿ ಕಿಡಿಕಾರಿದ್ದರು. ತಕ್ಷಣವೇ ಸ್ಥಳೀಯ ಪೊಲೀಸರು ಪ್ರತಿಕ್ರಿಯಿಸಿದ್ದು, ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here