ಸ್ನಾತಕೋತ್ತರ ಸಾಧಕರಿಗೆ ಚಿನ್ನದ ಪದಕ

0
medal
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದ ಸಮಾರಂಭದಲ್ಲಿ ಚಿರಂಜೀವ್ ಸಿಂಗ್ ಹಾಗೂ ಸಿ. ನಾರಾಯಣಸ್ವಾಮಿ ಅವರಿಗೆ `ಗ್ರಾಮೀಣಾಭಿವೃದ್ಧಿ ಚೇತನ’ ಬಿರುದು ನೀಡಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

Advertisement

ಪಂಜಾಬ್ ಪ್ರಾಂತದಿಂದ ಕರ್ನಾಟಕಕ್ಕೆ ಆಗಮಿಸಿ ಕನ್ನಡ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅಳವಡಿಸಿಕೊಂಡು ಅಚ್ಚ ಕನ್ನಡಿಗರಾಗಿ ಸಾರ್ಥಕ ಜೀವನ ನಡೆಸಿಕೊಂಡು ಬಂದಿರುವ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಗ್ ಅವರಿಗೆ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್) ಗೌರವ ಪದವಿ ಹಾಗೂ ಸಹಕಾರ ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಧಿಕಾರದ ವಿಕೇಂದ್ರೀಕರಣಗೊಳಿಸುವ ಹಾಗೂ ನೀತಿ-ನಿಯಮಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಪ್ರಸ್ತುತ ಕರ್ನಾಟಕ ರಾಜ್ಯದ 5ನೇ ಹಣಕಾಸು ಅಯೋಗದ ಅಧ್ಯಕ್ಷರಾಗಿ, ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಕಾರ್ಯಕಾರಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಿ. ನಾರಾಯಣಸ್ವಾಮಿ ಅವರಿಗೆ ಡಾಕ್ಟರ್ ಆಫ್ ಲಾಸ್ (ಎಲ್.ಎಲ್.ಡಿ) ಗೌರವ ಪದವಿ ನೀಡಲಾಯಿತು.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ್ ಚಟಪಲ್ಲಿ, ಕುಲಸಚಿವ ಡಾ.ಸುರೇಶ ನಾಡಗೌಡರ ಮುಂತಾದವರು ಸಾಧಕರಿಗೆ ಅಭಿನಂದನೆ ಸಲ್ಲಿಸಿದರು.

ಇದೇ ಸಮಾರಂಭದಲ್ಲಿ 11 ಸ್ನಾತಕೋತ್ತರ ಸಾಧಕರಾದ ಎಂ.ಬಿ.ಎ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಓಜಸ್ವಿ ಮಲ್ಲಾಡದ, ಎಂ.ಎ(ಆರ್.ಡಿ.ಪಿ.ಆರ್.) ವಿಭಾಗದ ಲಿಂಗರಾಜು ಎಚ್.ಎಮ್, ಎಂ.ಎ(ಪಿ.ಎ.)ವಿಭಾಗದ ಭೀಮಪ್ಪ ಚಲವಾದಿ, ಎಂ.ಎಸ್ಸಿ. (ಜಿ.ಐ.ಎಸ್ )ವಿಭಾಗದ ಯಲ್ಲಾಲಿಂಗ ಹೊಸಮನಿ, ಎಂ.ಎಸ್ಸಿ (ಎಫ್‌ಎಸ್‌ಟಿ) ವಿಭಾಗದ ನಿಶಾ ಎಂ, ಎಂಪಿಎಚ್ ವಿಭಾಗದ ಶರೋನ್ ಅನ್ನಾ ಥಾಮಸ್, ಎಂಎಸ್‌ಡಬ್ಲ್ಯೂ ವಿಭಾಗದ ಅಕ್ಷತಾ ಸಾನಿಕೊಪ್ಪ ಹಾಗೂ ಕೀರ್ತಿ ಗಾಮನಗಟ್ಟಿ, ಎಂಎ (ಡಿಇ)ವಿಭಾಗದ ಜಗದೀಶ ಎನ್.ಬಳಿಗಾರ, ಎಂಕಾಂ ವಿಭಾಗದ ಲತಾ ಕಡಾರ, ಎಂ.ಎಸ್‌ಸಿ(ಸಿ.ಎಸ್)ವಿಭಾಗದ ಪವಿತ್ರಾ ಶೇಟ ಇವರಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.


Spread the love

LEAVE A REPLY

Please enter your comment!
Please enter your name here